
ಬೆಂಗಳೂರು : ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದ್ದು, ಈ ಚಿತ್ರದ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಟಿ ಭಾವನಾ ಮೆನನ್ ಅವರು ನಿರ್ಣಾಯಕ ಪಾತ್ರದಲ್ಲಿ ವೀರವ್ವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಉಮಾಶ್ರೀ, ದಿಗಂತ್ ಮಂಚಾಲೆ, ಚೈತ್ರ ಜೆ ಆಚಾರ್, ರಂಗಾಯಣ ರಘು, ವಿಜಯ್ ಬಾಬು, ಮತ್ತು ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿರುವ ಉತ್ತರಕಾಂಡ ಚಿತ್ರದ ಮೂಲಕ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದು ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಾಹಕರಾಗಿದ್ದಾರೆ.
Poll (Public Option)

Post a comment
Log in to write reviews