ಸಿನಿ ಸ್ಟೈಲ್
ರೇವ್ ಪಾರ್ಟಿಯಲ್ಲಿ ನಾನು ಭಾಗಿಯಾಗಿದ್ದೆ ಎಂದು ವಿಡಿಯೋ ಹರಿಬಿಟ್ಟ ನಟಿ ಆಶಿರಾಯ್..!

ಬೆಂಗಳೂರು : ರೇವ್ ಪಾರ್ಟಿಯಲ್ಲಿ ನಾನು ಸಹ ಇದ್ದೆ ಎಂದು ಒಪ್ಪಿಕೊಂಡು ಟಾಲಿವುಡ್ ನಟಿ ಆಶಿರಾಯ್ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.
ಆ ವಿಡಿಯೋದಲ್ಲಿ ನಾನು ನನ್ನ ತಮ್ಮನ ಬರ್ತಡೇ ಪಾರ್ಟಿ ಅಂತಾ ಅಲ್ಲಿಗೆ ಹೋಗಿದ್ದೆ, ನಾನು ಅಲ್ಲಿದ್ದಿದ್ದು ನಿಜ ಆದ್ರೆ ಒಳಗೆ ಏನಾಗ್ತಿತ್ತು ನನಗೆ ಗೊತ್ತಿಲ್ಲ. ದಯವಿಟ್ಟು ನನ್ನನ್ನು ನಂಬಿ ಎಂದು ನಟಿ ಮನವಿ ಮಾಡಿದ್ದಾರೆ.
ಟಾಲಿವುಡ್ ನಟಿ ಆಶಿರಾಯ್ KS-100, ಮಿಸ್ಟರಿ ಆಫ್ ಸಾರಿಕಾ ಚಿತ್ರಗಳಲ್ಲಿ ನಟಿಸಿದ್ದು, ನಾನು ಈಗಷ್ಟೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೇನೆ. ನಾನು ಬೆಳೆಯುತ್ತಿರುವ ಹೆಣ್ಣು ಮಗಳು ನನಗೆ ಸಹಾಯ ಮಾಡಿ ಎಂದಿದ್ದಾರೆ.
Poll (Public Option)

Post a comment
Log in to write reviews