2024-12-24 06:35:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸೆಟ್‌ನಲ್ಲಿ ನಟ ಸೂರ್ಯ ತಲೆಗೆ ಪೆಟ್ಟು: ಅರ್ಧಕ್ಕೆ ನಿಂತ ಶೂಟ್

ಕಾಲಿವುಡ್​ನ ಖ್ಯಾತ ನಟ ಸೂರ್ಯ ಅವರ ತಲೆಗೆ ಪೆಟ್ಟಾದ ಬಗ್ಗೆ ವರದಿ ಆಗಿದೆ. ಅವರು ತ್ತೀಚೆಗೆ ‘ಸೂರ್ಯ 44’ ಸಿನಿಮಾದ ಶೂಟ್​ನಲ್ಲಿ ಬ್ಯುಸಿ ಇದ್ದು. ಪೆಟ್ಟಾಗಿರೋ ಕಾರಣದಿಂದ ಸಿನಿಮಾದ ಶೂಟ್​ನ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿ ಆಗಿದೆ.

  ಈ ತಿಂಗಳ ಆರಂಭದಲ್ಲಿ ಊಟಿಯಲ್ಲಿ ‘ಸೂರ್ಯ 44’ ಚಿತ್ರದ ಕೆಲಸ ಆರಂಭ ಆಗಿತ್ತು. ಈಗ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.

ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅಪಘಾತ ಸಂಭವಿಸುತ್ತದೆ. ಸೂರ್ಯ ಸಿನಿಮಾದ ತಂಡದವರೂ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಆದಾಗ್ಯೂ ಅವಘಡ ಸಂಭವಿಸಿದೆ. ಈಗ ಸೂರ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರೀತಿಯ ಸೂರ್ಯ ಅಭಿಮಾನಿಗಳೇ, ಇದೊಂದು ಸಣ್ಣ ಗಾಯ. ಭಯ ಬೇಡ. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿಯಿಂದ ಸೂರ್ಯ ಅಣ್ಣ ಅವರು ಆರಾಮಾಗಿ ಇದ್ದಾರೆ’ ಎಂದಿದ್ದಾರೆ ಅವರು.

ಈ ಘಟನೆ ಬಗ್ಗೆ ಕೇಳಿ ಸೂರ್ಯ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ವ್ಯಕ್ತವಾಗಿತ್ತು. ಆದರೆ, ಈಗ ನಿರ್ಮಾಪಕರು ಈ ಬಗ್ಗೆ ಮಾಹಿತಿ ಕೊಟ್ಟ ಬಳಿಕ ಎಲ್ಲರೂ ನಿಟ್ಟುಸಿರು ಬಿಡುವಂತೆ ಆಗಿದೆ. ಅವರು ಬೇಗ ಚೇತರಿಕೆ ಕಂಡು ಮತ್ತೆ ಶೂಟಿಂಗ್ ಸೆಟ್ ಸೇರಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಕಂಗುವ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಸೂರ್ಯ ಅವರೇ ಹೀರೋ. ಇದು ಬಿಗ್ ಬಜೆಟ್ ಸಿನಿಮಾ. ಈ ಚಿತ್ರವನ್ನು ಸಿರುಥಾಯಿ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ದಿಶಾ ಪಟಾಣಿ ಅವರು ಈ ಚಿತ್ರಕ್ಕೆ ನಾಯಕಿ. ಬಾಬಿ ಡಿಯೋಲ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

Post a comment

No Reviews