
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಗೆ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಥಮ್, “ನನಗೆ ಅಂಧಾಭಿಮಾನಿಗಳಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ ಕರ್ನಾಟಕ ಅಳಿಯ ತಂಡದ ಆಫೀಸ್ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ನು ಮುಂದೆ ನನಗೆ ಬರುವ ಕಾಲ್ ಮತ್ತು ಮೆಸೇಜ್ ಸೋಷಿಯಲ್ ಮೀಡಿಯಾ ವಾರ್ನಿಂಗ್ಸ್ ಎಲ್ಲವೂ ಪೊಲೀಸರೇ ನೋಡಿಕೊಳ್ತಾರೆ” ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
Poll (Public Option)

Post a comment
Log in to write reviews