
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಹಾಗೂ ರಾಜಕಾರಣಿಯಾಗಿರುವ ಮುಕೇಶ್‌ರನ್ನು ಬಂಧಿಸಲಾಗಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರೋ ಜಸ್ಟಿಸ್ ಹೇಮಾ ವರದಿ, ಒಬ್ಬೊಬ್ಬರ ತಲೆದಂಡಕ್ಕೆ ಕಾರಣವಾಗಿ ಈಗ ಮತ್ತೊಂದು ಹಂತ ತಲುಪಿದೆ.
ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಬಂಧನವಾಗಿದೆ. ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸ್‌ನಲ್ಲಿ ಮುಕೇಶ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಹಾಗೆ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡುವ ಮಾಹಿತಿಯೂ ಇದೆ. ಅವರ ಬಂಧನ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.
Poll (Public Option)

Post a comment
Log in to write reviews