
ಹೈದರಾಬಾದ್: ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನ ಶುರುಮಾಡಲು ಸಜ್ಜಾಗಿದ್ದು. ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ನಟನ ತಂದೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಇಂದು ಬೆಳಗ್ಗೆ 9:42ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ನಟನ ತಂದೆ, ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಘೋಷಿಸಿದ್ದಾರೆ.ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿದ್ದು, ಈ ಅನೌನ್ಸ್ಮೆಂಟ್ ಅವರ ಅಭಿಮಾನಿ ಬಳಗದಲ್ಲಿ ಸಂತಸದ ಅಲೆಯೆಬ್ಬಿಸಿದೆ.
ನಾಗಾರ್ಜುನ ಪೋಸ್ಟ್: ನಿಶ್ಚಿತಾರ್ಥವು ಒಂದು ಆತ್ಮೀಯ, ಖಾಸಗಿ ಸಮಾರಂಭವಾಗಿತ್ತು. ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಸಂತಸದ ಕ್ಷಣಗಳನ್ನು ಹಂಚಿಕೊಂಡ ನಾಗಾರ್ಜುನ, "ನಮ್ಮ ಮಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಇಂದು ಬೆಳಗ್ಗೆ 9:42ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬಹಳ ಖುಷಿಯಾಗಿದೆ. ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ಹ್ಯಾಪಿ ಕಪಲ್ಗೆ ಅಭಿನಂದನೆಗಳು. ಜೋಡಿಗೆ ಜೀವನಪರ್ಯಂತ ಪ್ರೀತಿ, ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ. ದೇವರು ಆಶೀರ್ವದಿಸಲಿ. ಎಂದು ಬರೆದುಕೊಂಡಿದ್ದಾರೆ.
ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಡೇಟಿಂಗ್ ವದಂತಿ ಈ ಹಿಂದೆಯೇ ಹರಡಿತ್ತು. ಕೆಲ ಸಮಯದ ಹಿಂದೆ ಅವರ ವೆಕೇಶನ್ ಫೋಟೋಗಳು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಊಹಾಪೋಹಗಳು ಉಲ್ಭಣಗೊಂಡವು. ಆದ್ರೆ ಈ ಬಗ್ಗೆ ನಟ ನಟಿ ಮಾಧ್ಯಮಗಳ ಮುಂದೆ ಮೌನ ವಹಿಸಿದ್ದರು. ಇಂದು ನಿಶ್ಚಿತಾರ್ಥ ಮಾಡಿಕೊಂಡು ಊಹಾಪೋಹಗಳು ನಿಜವೆಂದು ಸಾಬೀತುಪಡಿಸಿದ್ದಾರೆ.
ನಾಗ ಚೈತನ್ಯ ಮತ್ತು ಶೋಭಿತಾ ಪರಸ್ಪರ ಸಂತೋಷಕರ, ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ ಎಂದು ಮೂಲವೊಂದು ಕೆಲವು ತಿಂಗಳ ಹಿಂದೆ ನ್ಯೂಸ್ ಪೋರ್ಟಲ್‌ಗೆ ತಿಳಿಸಿತ್ತು. ಅವರು ಹಾಗಾಗ ಪ್ರವಾಸ ಕೈಗೊಂಡಿದ್ದರು
ಸೂಪರ್ ಸ್ಟಾರ್ ನಾಗ ಚೈತನ್ಯ ಈ ಹಿಂದೆ ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ್ದಾರೆ. 2009ರಲ್ಲಿ ಪ್ರೇಮಕಥೆ 'ಯೆ ಮಾಯಾ ಚೆಸಾವೆ' ಸೆಟ್‌ನಲ್ಲಿ ಪರಸ್ಪರ ಭೇಟಿಯಾದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಭೇಟಿಯಾದ ಕೆಲ ಸಮಯದ ನಂತರ ಡೇಟಿಂಗ್ ಪ್ರಾರಂಭಿಸಿದರು. 2017ರಲ್ಲಿ ದಾಂಪತ್ಯ ಜೀವನ ಆರಂಭಿಸಿ 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಜಂಟಿ ಹೇಳಿಕೆಯೊಂದಿಗೆ ತಾವು ಬೇರೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು.
Poll (Public Option)

Post a comment
Log in to write reviews