
ಬೆಂಗಳೂರು : ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಜೊತೆ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿದ ಶಾಂತಿನಗರದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನ ವಜಾಗೊಳಿಸಿದೆ. 2018ರಲ್ಲೇ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು. ನಂತರ 2019ರಲ್ಲಿ ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಜೊತೆ ಬದುಕಲು ಸಿದ್ದವಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಮಕ್ಕಳ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ಹೇಳಿಕೆ ನೀಡಿದ್ದರು. ಈಗಾಗಲೇ ನಾಗರತ್ನಗೆ ಜೀವನಾಂಶ ನೀಡಿದ್ದು ಆದಷ್ಟು ಬೇಗ ವಿಚ್ಛೇದನ ಕೊಡಿಸಿ ಎಂದು ವಿಜಯ್ ಕೇಳಿಕೊಂಡಿದ್ದರು. ಆದರೆ ಈ ಕುರಿತಾಗಿ ನಾಗರತ್ನ ಜೀವನಾಂಶ ನೀಡಿರುವುದಕ್ಕೆ ದಾಖಲೆ ಕೊಡಿ ಎಂದು ವಿಜಯ್ ಅವರನ್ನು ಪ್ರಶ್ನಿಸಿದ್ದರು. ಈ ಬಗ್ಗೆ ದುನಿಯಾ ವಿಜಯ್ ಯಾವ ಪ್ರತಿಕ್ರಿಯೆ ನೀಡಿದ್ದಿಲ್ಲ. ಇದಾದ 6 ವರ್ಷಗಳ ನಂತರ ಅಂದ್ರೆ ಇಂದು ಈ ಪ್ರಕರಣವನ್ನು ಕೋರ್ಟ್ ವಜಾ ಗೊಳಿಸಿ ಆದೇಶ ಹೊರಡಿಸಿದೆ.
Poll (Public Option)

Post a comment
Log in to write reviews