ನಟ ದರ್ಶನ್ ಅಭಿಮಾನಿಯನ್ನು ಕೊಲ್ಲಲು ಅಭಿಮಾನಿಗಳನ್ನೆ ಬಳಸಿಕೊಂಡ: ರಾಮ್ ಗೋಪಾಲ್ ವರ್ಮಾ
ಬೆಂಗಳೂರು: ಚಿತ್ರರಂಗದಲ್ಲಿ ಸ್ಟಾರ್ ನಟರನ್ನು ದೇವರಂತೆ ಕಾಣಲಾಗುತ್ತದೆ. ಅಭಿಮಾನಿಗಳು ಆರಾಧಿಸುತ್ತಾರೆ. ಅದನ್ನೇ ಎನ್ ಕ್ಯಾಶ್ ಮಾಡಿಕೊಂಡ ಸ್ಟಾರ್ ನಟ ದರ್ಶನ್ ತನ್ನ ಅಭಿಮಾನಿಯನ್ನು ಕೊಲ್ಲಲು ಅಭಿಮಾನಿಗಳನ್ನ ಬಳಸಿಕೊಂಡ. ದರ್ಶನ್ ಆಜ್ಞೆಗೆ ಕಾದವರಂತೆ ಪ್ರಾಣಿಗಳನ್ನು ಚಚ್ಚಿ ಕೊಲ್ಲುವಂತೆ ಅವರು ಕೊಂದು ಬಿಟ್ಟರು. ಆಜ್ಞೆ ಮಾಡಿದವ ದೇವರಲ್ಲ. ಕೊಂದವರು ಭಕ್ತರು ಅಲ್ಲ ಕೇವಲ ಅಭಿಮಾನಿಗಳು ಎಂದು ದರ್ಶನ್ ಮಾಡಿದ್ದು ಸರಿ ಎಂದು ಪರ ಫ್ಯಾನ್ಸ್ ವಹಿಸಿಕೊಂಡು ಬರುತ್ತಿರುವವರಿಗೆ ಮುಟ್ಟಿನೋಡಿಕೊಳ್ಳುವಂತೆ ರಾಮ್ ಗೋಪಾಲ್ ವರ್ಮಾ ಉತ್ತರಿಸಿದ್ದಾರೆ.
ಸಿನಿಮಾಗಳಲ್ಲಿ ನಿರ್ದೇಶಕರು ಚಿತ್ರಕಥೆ ಬರೆದ ಬಳಿಕವೇ ಸಿನಿಮಾದ ಶೂಟಿಂಗ್ ಆರಂಭಿಸುತ್ತಾರೆ. ಹಲವು ಸಂದರ್ಭದಲ್ಲಿ ನಿರ್ದೇಶಕರು ಸೆಟ್ನಲ್ಲೂ ಚಿತ್ರಕಥೆ ಬರೆಯುತ್ತಾರೆ. ಬದಲಾಯಿಸುತ್ತಾರೆ. ನೇಟಿವಿಟಿ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುತ್ತಾರೆ ಆದರೆ, ದರ್ಶನ್ ಪ್ರಕರಣದಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ ಎಂದೆನಿಸುತ್ತದೆ ಎಂದು ರಾಮ್ ಗೋಪಾಲ್ ವರ್ಮ ಕಿಡಿ ಕಾರಿದ್ದಾರೆ. ದರ್ಶನ್ ಅವರು ಕೊಲೆ ಕೇಸ್ನಲ್ಲಿ ಭಾಗಿ ಆಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಥೆ ಹೇಳುತ್ತಿದ್ದಾರೆ ಎಂಬರ್ಥದಲ್ಲಿ ಆರ್ಜಿವಿ ಮಾತನಾಡಿದ್ದಾರೆ.
Post a comment
Log in to write reviews