
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ದೊರಕಿದೆ. ನಟ ದರ್ಶನ್‌ಗೆ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ನೀಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ದರ್ಶನ್ ಅವರು ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಆದಾಗ್ಯೂ, ಆರು ವಾರಗಳ ಬಳಿಕ ಅವರು ಮತ್ತೆ ಜೈಲಿಗೆ ಹಾಜರಾಗಬೇಕಿದೆ.
ಈ ಮಧ್ಯೆ ನಟ ದರ್ಶನ್ ಮತ್ತು ವಿಜಯಲಕ್ಷ್ಮಿಯವರ ಮಗ ವಿನೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ದರ್ಶನ್ ಕಳೆದ ರಾತ್ರಿಯೇ ಮಗನ ಜೊತೆ ಕೇಕ್ ಕಟ್ ಮಾಡಿ ವಿಶ್ ಮಾಡಿದ್ದಾರೆ. ವಿಪರೀತ ಬೆನ್ನುನೋವಿನಿಂದ ಬಳಲುತ್ತಿರುವ ಅವರು ಮಧ್ಯಾಹ್ನ ವೈದ್ಯರನ್ನು ಕಾಣಲಿದ್ದಾರೆ.
ಇನ್ನೂ ಅವರ ಅಭಿಮಾನಿಗಳು ಮನೆ ಬಳಿ ಜಮಾಯಿಸಿ ಗಲಾಟೆಯೆಬ್ಬಿಸಿದರೆ ನಟ ಮತ್ತು ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡುತ್ತಿರುವ ಜನಕ್ಕೆ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ಭದ್ರತೆಯನ್ನು ಒದಗಿಸಿದ್ದಾರೆ.
Poll (Public Option)

Post a comment
Log in to write reviews