
ರಾಮನಗರ: ನಟ ದರ್ಶನ್ ಅಭಿಮಾನಿ ಎನ್ನಲಾದ ಯುವಕನೋರ್ವ ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮೃತನಾದವ ಭೈರೇಶ್(33). ರಾಮನಗರದ ಚನ್ನಪಟ್ಟಣ ತಾಲೂಕಿನ ಮೊಳೆ ದೊಡ್ಡಿಯಲ್ಲಿ ಈ ಘಟನೆ ನಡೆದಿದೆ. ಕಳೆದ 2–3 ದಿನಗಳಿಂದ ಭೈರೇಶ್ ಅನ್ನ ನೀರು ಬಿಟ್ಟಿದ್ದ ಎನ್ನಲಾಗಿದೆ. ಕೊಲೆ ಕೇಸ್ ನಲ್ಲಿ ಸಿಲುಕಿ ದರ್ಶನ್ ಅವರ ಪರಿಸ್ಥಿತಿ ನೆನೆದು ಸಾಕಷ್ಟು ನೋವಿನಲ್ಲಿದ್ದರು ಎಂದು ಹೇಳಲಾಗಿದೆ. ಸರಿಯಾಗಿ ಆಹಾರ ಸೇವಿಸದ ಹಿನ್ನೆಲೆ ನಿತ್ರಾಣಗೊಂಡು ಮೋರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಸಾವಿಗೆ ಶರಣಾದರೇ ಅನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಪ್ರರಕಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews