ಹೋಟೆಲ್, ಮಾಲ್‌ಗಳ ಆಹಾರದಲ್ಲಿ ಕೆಮಿಕಲ್, ಕಲರ್ ಬಳಸಿದರೆ ಕ್ರಮ: ಸಚಿವ ದಿನೇಶ್ ಗುಂಡೂರಾವ್ !
ಬೆಂಗಳೂರು: ರಾಜಧಾನಿಯಲ್ಲಿರುವ ಹೋಟೆಲ್ (Hotels) ಹಾಗೂ ಮಾಲ್‌ಗಳಲ್ಲಿ (Mall) ನೀಡಲಾಗುವ ಆಹಾರದಲ್ಲಿ ಕೃತಕ ಕಲರ್ (Added colour) ಹಾಗೂ ಕೆಮಿಕಲ್ (Chemicals in Food) ಬಳಕೆ ಮಾಡದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಆರೋಗ್ಯ ಸಚಿವರು ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಲ್‌ಗಳು ಹಾಗೂ ಹೋಟೆಲ್ ಮಾಲೀಕರ ಜೊತೆಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿ ಆಹಾರದಲ್ಲೂ ಕಲರ್ ಬಳಕೆ, ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತನಿಖೆ ಮಾಡಿದಾಗ ಮಾಲ್‌ಗಳಲ್ಲಿನ ಫುಡ್ ಕಳಪೆ ಎಂದು ಪತ್ತೆಯಾಗಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲರೂ ಆಹಾರದಲ್ಲಿ ಶುಚಿತ್ವ ಕಾಪಾಡುವಂತೆ ಹಾಗೂ ಕಲರ್ ಮುಕ್ತ ಆಹಾರ ನೀಡುವಂತೆ ಸಚಿವರು ಮಾಲ್ ಹಾಗೂ ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ತರಕಾರಿ ಮಾರಾಟಗಾರರಿಗೂ ಪರವಾನಿಗೆ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲಾ ತರಕಾರಿ ವ್ಯಾಪಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಿಗೆ ಪಡೆಯಬೇಕು. ತರಕಾರಿಗಳ ಸ್ಯಾಂಪಲ್‌ಗಳನ್ನು ಅಗತ್ಯ ಬಿದ್ದರೆ ಪರೀಕ್ಷೆ ನಡೆಸಬೇಕು. ತರಕಾರಿ- ಹಣ್ಣು ಮಾರುವಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಸಾವಯವ ತರಕಾರಿ ಮಾರುತ್ತೇವೆ ಎಂದು ಹೆಚ್ಚಿನ ದರದಲ್ಲಿ ಕಳಪೆ ತರಕಾರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡುಬರುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
Post a comment
Log in to write reviews