
ತೆಲಂಗಾಣ: ಬಲಿ ಕೊಡಲು ಹಸುಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಗುಂಪೊಂದು ಮದರಸಾ ಮೇಲೆ ದಾಳಿ ನಡೆಸಿದ್ದರಿಂದ ಹಲವು ಜನರರು ಗಾಯಗೊಂಡಿರುವ ಘಟನೆ ಮೇದಕ್‌ನಲ್ಲಿ ನಡೆದಿದೆ.
ಮಿರಾಜ್ ಉಲ್ ಉಲೂಮ್ ಮದರಸಾದ ಆಡಳಿತ ಮಂಡಳಿಯು ಬಕ್ರೀದ್ ನಿಮಿತ್ತ ದನವನ್ನು ಬಲಿಗಾಗಿ ಖರೀದಿಸಿತ್ತು. ಅವರು ದನಗಳನ್ನು ಕರೆತಂದ ಕೂಡಲೇ ಮದರಸಾದ ಸುತ್ತಲೂ ಜನರ ಗುಂಪು ಜಮಾಯಿಸಿ ಬಲಿಯನ್ನು ವಿರೋಧಿಸಲು ಪ್ರಾರಂಭಿಸಿತು. ಆದರೆ, ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದರು ಎನ್ನಲಾಗಿದೆ.
ಆರ್‌ಎಸ್‌ಎಸ್ ಹಾಗೂ ಹಿಂದೂಪರ ಸಂಘಟನೆಗಳು ಮದರಸಾ ಮೇಲೆ ದಾಳಿ ಮಾಡಿ ಆಡಳಿತ ಮಂಡಳಿಯ ಸದಸ್ಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಎಐಎಂಐಎಂ ಶಾಸಕ ಎಂ ಕೌಸರ್ ಮೊಹಿಯುದ್ದೀನ್ ಆರೋಪಿಸಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ, ಗುಂಪು ಆಸ್ಪತ್ರೆಯನ್ನು ಧ್ವಂಸ ಮಾಡಿದೆ ಎಂದು ಅವರು ಹೇಳಿದರು. ಮೇಡಕ್ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಕೌಸರ್ ಹೇಳಿದ್ದಾರೆ.
Poll (Public Option)

Post a comment
Log in to write reviews