2024-09-19 04:43:03

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್  ಭೋಪಾಲ್ನಲ್ಲಿ ಆರೋಪಿ ಅಭಿಷೇಕ್ ಅರೆಸ್ಟ್

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್ನಲ್ಲಿ ಬಂಧಿಸಿದ್ದಾರೆ.

ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬ ಯುವತಿಯ ಭೀಕರ ಕೊಲೆ ನಡೆದಿತ್ತು. ರಾತ್ರಿ 11:13 ನಿಮಿಷಕ್ಕೆ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದು ಆಕೆ ಬಾಗಿಲು ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಮನಬಂದಂತೆ ಇರಿದು ಕೃತಿ ಕುಮಾರಿಯ ಹತ್ಯೆ ಮಾಡಿದ್ದ. ಕೃತಿ ಕುಮಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ, ಬಿಡದೇ ಹಲವು ಬಾರಿ ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ಬಳಿಕ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ಗಾಗಿ ಹುಡುಕಾಟ ಆರಂಭಿಸಿದ್ದರು. ಕೊಲೆ ಮಾಡಿದ ಬಳಿಕ ಆರೋಪಿ ಅಭಿಷೇಕ್ ಬಟ್ಟೆ ಬದಲಿಸಿಕೊಂಡು ಪರಾರಿಯಾಗಿದ್ದ. ತನಿಖೆ ವೇಳೆ ಅಭಿಷೇಕ್ ಭೂಪಾಲ್ಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು.

ಇದೀಗ ಕೋರಮಂಗಲ ಪೊಲೀಸರು ಭೂಪಾಲ್ಗೆ ತೆರಳಿ ಆರೋಪಿ ಅಭಿಷೇಕ್ನನ್ನು ಬಂಧಿಸಿದ್ದಾರೆ. ನಿನ್ನೆ ಆರೋಪಿ ಅಭಿಷೇಕ್ನನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ.
 

Post a comment

No Reviews