ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ, ಅತ್ಯಾಚಾರ, ಹಾಗೂ ಹನಿಟ್ರ್ಯಾಪ್ ಷಡ್ಯಂತ್ರ ಮಾಡುತ್ತಿದ್ದರು ಎಂದು ಮುನಿರತ್ನ ವಿರುದ್ಧ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಅಟ್ರಾಸಿಟಿ ಕೇಸ್ಗಳ ದುರ್ಬಳಕೆ ಮಾಡುತ್ತಿದ್ದರು ಎಂಬ ಆರೋಪವೂ ಈಗ ಕೇಳಿಬಂದಿದೆ. ಮುನಿರತ್ನ ಅಟ್ರಾಸಿಟಿ ಕೇಸ್ಗಳನ್ನೇ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಪ್ರಭಾವ ಬಳಸಿ ಅಟ್ರಾಸಿಟಿ ಕೇಸ್ಗಳನ್ನು ದಾಖಲಿಸುತ್ತಿದ್ದರು. ಈ ಹಿಂದೆ ಆರ್,ಆರ್ ನಗರದಲ್ಲಿ ಹಲವರ ವಿರುದ್ಧ ಅಟ್ರಾಸಿಟಿ ಕೇಸ್ಗಳು ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುನಿರತ್ನರನ್ನು ಮತ್ತೆ ಬಂಧಿಸಲಾಗಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕಗ್ಗಲೀಪುರ ಪೊಲೀಸರು ಮುನಿರತ್ನರನ್ನು ಬಂಧಿಸಿದ್ದಾರೆ.
Post a comment
Log in to write reviews