
ಬೆಂಗಳೂರು : ವಿಜ್ಞಾನ ನಗರದ ಬಸ್ ನಿಲ್ದಾಣ ಬಳಿರುವ ಫರ್ನಿಚರ್ ಶಾಪ್ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.
ಶಿವರಾಜನ್ ಎಂಬುವರ ಮಾಲೀಕತ್ವದ ಫರ್ನಿಚರ್ ಶಾಪ್ಗೆ ಬೆಂಕಿ ಬಿದ್ದಿದ್ದು, ಫರ್ನಿಚರ್ಗಳೆಲ್ಲಾ ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಹೇಳಲಾಗ್ತಿದೆ. ಅಂಗಡಿ ಮಾಲೀಕ ಶಾಪ್ ಕ್ಲೋಸ್ ಮಾಡಿದ ಬಳಿಕ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. 15ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.
Poll (Public Option)

Post a comment
Log in to write reviews