2024-09-19 04:51:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಉಕ್ರೇನ್ ವಿರುದ್ಧ ಸುಮಾರು 57 ಡ್ರೋನ್‌ ಹಾರಿಸಿದ ರಷ್ಯಾ 

ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗ ದಿಢೀರ್ ರಷ್ಯಾ ಹಾರಿಸಿದ 57 ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಿದ ಉಕ್ರೇನ್. ಅದ್ರಲ್ಲೂ ಇತ್ತೀಚೆಗೆ ಅಮೆರಿಕದಿಂದ ಭಯಾನಕ ಅಸ್ತ್ರ ಪಡೆದ ಉಕ್ರೇನ್ ಸೇನೆ. ಈಗ ತನ್ನ ಶತ್ರು ರಷ್ಯಾ ವಿರುದ್ಧ ಮತ್ತಷ್ಟು ರಕ್ಷಣಾತ್ಮಕ ಆಟವನ್ನು ಶುರು ಮಾಡಿದೆ. ಜಗತ್ತಿನ ನೆಮ್ಮದಿಯನ್ನೇ ಹಾಳು ಮಾಡಿರುವ ಉಕ್ರೇನ್ & ರಷ್ಯಾ ಯುದ್ಧ ಯಾವುದೇ ಕಾರಣಕ್ಕೆ ಸೈಲೆಂಟ್ ಆಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. 
ಭಾರತ ಮೂಲದ ಯುವಕರಿಗೆ ಯುದ್ಧಕ್ಕೆ ನೋ ಎಂಟ್ರಿ! 57ರಲ್ಲಿ 53 ಡ್ರೋನ್ ಖತಂ! ದಿಢೀರ್ ರಷ್ಯಾ ಸೇನೆ ತನ್ನ ಶತ್ರು ಉಕ್ರೇನ್ ವಿರುದ್ಧ ಸುಮಾರು 57 ಡ್ರೋನ್‌ ಹಾರಿಸಿದ್ದು, ಈ 57 ಡ್ರೋನ್ ಪೈಕಿ ಒಟ್ಟು 53 ಡ್ರೋನ್‌ಗಳನ್ನು ಹೊಡೆದು ಉರುಳಿಸಲಾಗಿದೆ. ಈ ಕುರಿತು ಉಕ್ರೇನ್ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೆಲ್ಲಕ್ಕಿಂತ ಭಯಾನಕ ಆರೋಪ ಏನು ಅಂದ್ರೆ, ಉತ್ತರ ಕೊರಿಯಾದಲ್ಲಿ ನಿರ್ಮಿಸಿರುವ 4 ಕ್ಷಿಪಣಿಗಳನ್ನು ಕೂಡ ರಷ್ಯಾ ಸೇನೆ ಬಳಸಿಕೊಂಡು ದಾಳಿ ಮಾಡಿದೆ ಎಂಬ ಗಂಭೀರ ಆರೋಪ ಮಾಡಿದ ಉಕ್ರೇನ್ ಸೇನೆ. 
ಹೀಗೆ ರಷ್ಯಾ & ಉಕ್ರೇನ್ ನಡುವೆ ತಿಕ್ಕಾಟ ಮತ್ತಷ್ಟು ಹೆಚ್ಚಾಗುತ್ತಿದೆ. ಭಾರತೀಯರನ್ನು ನೇಮಕ ಮಾಡಲ್ಲ ರಷ್ಯಾ & ಉಕ್ರೇನ್ ನಡುವೆ ಭೀಕರ ರಣಕಾಳಗ ನಡೆಯುತ್ತಿದ್ದು, ಭಾರಿ ಆತಂಕ ಮನೆಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದು ದುರದೃಷ್ಟಕರ ಎಂದಿದೆ ರಷ್ಯಾ ರಾಯಭಾರ ಕಚೇರಿ. ಅಲ್ಲದೆ ಭಾರತ ಮೂಲದ ಪ್ರಜೆಗಳನ್ನು ಮುಂದೆ ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಕೂಡ ತಿಳಿಸಲಾಗಿದೆ. ಆ ಮೂಲಕ ಇದೇ ಏಪ್ರಿಲ್‌ ತಿಂಗಳಿಂದಲೇ ರಷ್ಯಾ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿ ನಿಲ್ಲಿಸಿದ್ದೇವೆ ಎಂಬ ವಿಚಾರವನ್ನು ಕೂಡ, ರಷ್ಯಾ ರಾಯಭಾರ ಕಚೇರಿ ಇದೀಗ ತಿಳಿಸಿದೆ.
 

Post a comment

No Reviews