
ಮಹಾರಾಷ್ಟ್ರ: ಯುವತಿ ಒಬ್ಬಳು ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಸುಲಿಭಂಜನ್‌ನಲ್ಲಿರುವ ದತ್ತ ದೇವಸ್ಥಾನದ ಬಳಿ ನಡೆದಿದೆ.
ಛತ್ರಪತಿ ಸಂಭಾಜಿನಗರ ವ್ಯಾಪ್ತಿಯ ಹನುಮಂತನಗರ ನಿವಾಸಿ ಶ್ವೇತಾ ದೀಪಕ್ ಸುರವಾಸೆ ಎಂಬುವರು ಕಾರಿನಲ್ಲಿ ಕೂತು ರೀಲ್ಸ್ ಮಾಡಲು ಹೋಗಿ ಮೃತಪಟ್ಟಿದ್ದಾರೆ. ಶ್ವೇತಾ ಹಾಗೂ ಆಕೆಯ ಇಬ್ಬರು ಸ್ನೇಹಿತರು ಸುಲಿಭಂಜನ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಯುವತಿ ಬೆಟ್ಟದ ಮೇಲೆ ಕಾರು ರಿವರ್ಸ್ ತೆಗೆಯುವ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕೆಯ ನಿಯಂತ್ರಣಕ್ಕೆ ಸಿಗದ ಕಾರು ಕಂದಕಕ್ಕೆ ಉರುಳಿದೆ. ಅಲ್ಲದೇ ಕಾರಿನಲ್ಲಿದ್ದ ಶ್ವೇತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆ ಮಾಹಿತಿ ತಿಳಿದು ಖುಲ್ತಾಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಫರಾಟೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಅಲ್ಲದೇ ಕಂದಕಕ್ಕೆ ಬಿದ್ದ ಕಾರಿನಿಂದ ಯುವತಿಯನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಯುವತಿ ಬದುಕುಳಿಯಲಿಲ್ಲ.
Poll (Public Option)

Post a comment
Log in to write reviews