
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮಹಿಳಾ ಪ್ರಯಾಣಿಕರ ಮೇಲೆ ರೇಗಾಡುವ ಕೇಸ್ಗಳು ಹೆಚ್ಚಾಗುತ್ತಿದ್ದು, ಜಾಸ್ತಿ ಬಾಡಿಗೆ ಹಣ ಕೊಡಲು ಆಗುವುದಿಲ್ಲ ಎಂದ ಯುವತಿಗೆ ಆಟೋ ಚಾಲಕ ಅವಾಚ್ಯ ಪದ ಬಳಸಿ ನಿಂದಿಸಿರುವ ಘಟನೆ ನಗರದ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.
ಇನ್ನೂ ಯುವತಿ ಆಟೋ ಹತ್ತುವಾಗ ಬಾಡಿಗೆ ಕೇಳಿದ್ದಾರೆ. ಈ ವೇಳೆ ಆಟೋ ಚಾಲಕ ಹೆಚ್ಚಿನ ಬಾಡಿಗೆ ಹೇಳಿದ್ದು ಮಾತಿಗೆ ಮಾತು ಬೆಳೆದಿದೆ. ಸಿಲ್ಕ್ ಬೋರ್ಡ್ ಇಲ್ಲೆ ಇದ್ಯಾ ಎನ್ನುತ್ತಾ ಅವಾಚ್ಯ ಶಬ್ಧಗಳಿಂದ ಯುವತಿಗೆ ಆಟೋ ಚಾಲಕ ಕೆಲವು ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. 150 ರೂಪಾಯಿ ಬಾಡಿಗೆ ಕೊಡ್ತೀನಿ ಜಾಸ್ತಿ ಕೊಡೋಕೆ ಆಗೋದಿಲ್ಲ ಎಂದು ಯುವತಿ ಹೇಳಿದ್ದು ಅಸಭ್ಯ ಪದಬಳಿಸಿ ನಿಂದನೆ ಮಾಡಿ ಚಾಲಕ ಆಟೋ ಹತ್ತಿ ಹೊರಟಿದ್ದಾನೆ. ಈ ಸಂಬಂಧ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ಯುವತಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
Poll (Public Option)

Post a comment
Log in to write reviews