
ಬೆಂಗಳೂರು: ಪಶ್ಚಿಮ ಬಂಗಾಳದಿಂದ ಅಕ್ಕನ ಮನೆಗೆ ಬಂದಿದ್ದ ಯುವತಿ ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಆತ್ಮ ಹತ್ಯೆ ಮಾಡಿ ಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.
ಲಿಖಿತ ಗೇಸರ್ (25) ಮೃತ ಯುವತಿ ಎಂದು ತಿಳಿದು ಬಂದಿದೆ, ಈಕೆಯ ಅಕ್ಕ-ಭಾವ ಸೋಲದೇವನಹಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿ ವಾಸವಾಗಿದ್ದಾರು. ಇವರ ಮನೆಗೆ ಲಿಖಿತ ಹತ್ತು ದಿನಗಳ ಹಿಂದೆಯಷ್ಟೆ ಬಂದಿದ್ದಳು. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಮನೆ ಸಮೀಪವಿರುವ ರೈಲ್ವೆ ನಿಲ್ದಾಣದ ಹಳಿ ಬಳಿ ಹೋಗಿ ರೈಲು ಬರುವುದನ್ನೇ ಕಾದು ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾಳೆ.
ಲಿಖಿತ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಹಾಗಾಗಿ ವಾತಾವರಣ ಬದಲಾವಣೆಗಾಗಿ ಆಕೆಯನ್ನು ಅಕ್ಕ-ಭಾವ ತಮ ಮನೆಗೆ ಕರೆಸಿಕೊಂಡಿದ್ದರು. ಪ್ರೇಮ ವೈಫಲ್ಯದಿಂದ ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Poll (Public Option)

Post a comment
Log in to write reviews