2024-12-24 07:19:39

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಪ್ರಾಪ್ತೆಗೆ ಐ ಲವ್ ಯು ಹೇಳಿದ ಯುವಕನಿಗೆ 2 ವರ್ಷ ಜೈಲು ಶಿಕ್ಷೆ!

ಮುಂಬೈ: ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ರಪೋಸ್ ಮಾಡಿದ 19ರ ಯುವಕನ ವಿರುದ್ಧ ಪೋಕ್ಸೋ ಪ್ರಕರಣದಡಿ ಇದೀಗ 2 ವರ್ಷ ಜೈಲು ಶಿಕ್ಷೆಯಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ತೀರ್ಪಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಟಿ ಪುಡಿ ತರಲು ಅಂಗಡಿ ತೆರಳಿದ 14 ವರ್ಷದ ಬಾಲಕಿಯ ಕೈಹಿಡಿದ ಯುವಕ, ಐ ಲವ್ ಯು ಎಂದು ಪ್ರಪೋಸ್ ಮಾಡಿದ್ದಲ್ಲದೆ, ಈ ವಿಚಾರ ಮನೆಯಲ್ಲಿ ಹೇಳಬೇಡ ಎಂದು ಗದರಿಸಿದ್ದಾನೆ. ಕೈಗಳನ್ನು ಗಟ್ಟಿಯಾಗಿ ಹಿಡಿದು ಪ್ರೀತಿಯ ಮಾತನಾಡಲು ಆರಂಭಿಸಿದ್ದಾನೆ. ಕೈಗಳನ್ನು ಬಿಡಿಸಿಕೊಂಡ ಬಾಲಕಿ ಕಣ್ಣೀರಿಟ್ಟಿದ್ದಾಳೆ. ಇದೇ ವೇಳೆ ಈ ವಿಚಾರ ಮನೆಯಲ್ಲಿ ಹೇಳಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾನೆ.

ಬಾಲಕಿ ಚಹಾ ಪುಡಿಯನ್ನು ಪಡೆಯದೇ ಕಣ್ಣೀರಿಡುತ್ತಲೆ ಮನೆಗೆ ಮರಳಿದ ಬಾಲಕಿ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾಳೆ. ಶಾಕಿನಾಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಠಾಣೆಗೆ ತೆರಳಿದ ಬಾಲಕಿ ತಾಯಿ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿ ಸಾಕ್ಷಿಗಳನ್ನು ಕಲೆ ಹಾಕಿ ಕೋರ್ಟ್‌ಗೆ ಪ್ರಸ್ತುತಪಡಿಸಿದ್ದಾರೆ. ಈ ಪೋಕ್ಸೋ ಪ್ರಕರಣ ವಿಚಾರಣೆ ನಡೆಸಿದ  ಜಡ್ಜ್ ಅಶ್ವಿನಿ ಲೋಕಂಡೆ, ಜುಲೈ 30 ರಂದು ಮಹತ್ವದ ತೀರ್ಪು ನೀಡಿದ್ದಾರೆ. ಬಾಲಕಿ ತಾಯಿ ದಾಖಲಿಸಿದ ದೂರಿನ ಅನ್ವಯ ವಿಚಾರಣೆಯಲ್ಲಿ ಯುವಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ ಪೋಕ್ಸೋ ಪ್ರಕರಣ ವಿಚಾರಣೆ ನಡೆಸಿದ ಜಡ್ಜ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ವಿಚಾರಣೆ ವೇಳೆ ತಾನು ನಿರಪರಾಧಿ ಎಂದು ಯುವಕನ ಪರ ವಕೀಲರು ವಾದಿಸಿದ್ದಾರೆ. ಬಾಲಕಿ ಹಾಗೂ ಯುವಕ ಇಬ್ಬರು ಪ್ರೀತಿಯಲ್ಲಿದ್ದರು ಎಂದು ವಾದಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಡ್ಜ್, ಇಬ್ಬರು ಪ್ರೀತಿಯಲ್ಲಿದ್ದರೆ, ಈ ವಿಚಾರ ಅಳುತ್ತಾ ತಾಯಿಯಲ್ಲಿ ಹೇಳವ ಪ್ರಸಂಗ ಬಾಲಕಿಗೆ ಬರುತ್ತಿರಲಿಲ್ಲ. ಪೋಷಕರಿಗೆ ಈ ವಿಚಾರವನ್ನು ಮುಚ್ಚಿಡುತ್ತಿದ್ದಳು ಎಂದು ಗದರಿದ್ದಾರೆ. ಸುದೀರ್ಘ ವಿಚಾರಣೆ ಬಳಿಕ 19ರ ಯುವಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

 

Post a comment

No Reviews