
ಬೆಂಗಳೂರು: ಬಾರ್‌ನಲ್ಲಿ ಕುಡಿಯಲು ಹೋಗಿದ್ದ ವೇಳೆ ಗುರಾಯಿಸಿದ್ದಕ್ಕೆ ಗಲಾಟೆ ನಡೆದು ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಇಂದು ಸಂಜೆ 7 ಗಂಟೆ ಸುಮಾರಿಗೆ ಮೃತ ಹರ್ಷ ಕುಡಿಯಲು ಕಲ್ಕೆರೆ ಗೇಟ್ ನಲ್ಲಿರುವ SKR ಬಾರ್‌ಗೆ ಹೋಗಿದ್ದಾನೆ, ಕುಡಿಯುತ್ತಾ ಪಕ್ಕದ ಟೇಬಲ್ ಜೋರಾಗಿ ಮಾತಾನಾಡುತ್ತಿದ್ದವರ ಕಡೇಗೆ ತಿರುಗಿ ನೋಡಿದ್ದಾನೆ.
ಆ ವೇಳೆ ಕುಡಿದ ಮತ್ತಿನಲ್ಲಿ ಯುವಕರು ಏನೋ ಗುರಾಯಿಸ್ತಾ ಇದೀಯಾ ಎಂದು ಜಗಳ ಆರಂಭಿಸಿದ್ದಾರೆ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದು ನಂತರ ಹೊಟ್ಟೆಗೆ ಚುಚ್ಚಿದ್ದಾರೆ ಹೊಡೆತ ತಿಂದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತಸ್ರಾವಾಗಿ ಮೃತಪಟ್ಟಿದ್ದಾನೆ, ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Poll (Public Option)

Post a comment
Log in to write reviews