2024-12-24 06:15:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಶೆಯಲ್ಲಿ ಕಾರು ಗಾಜು ಒಡೆದು ಯುವಕನ ಪುಂಡಾಟ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕ ಕಾರಿನ ಗ್ಲಾಸ್​ ಒಡೆದು ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ  ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ.

ಕೃತ್ಯ ಎಸಗಿದ ಆರೋಪಿ ನವೀನ್ ರೆಡ್ಡಿ ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ‌ ಒಳಗಿದ್ದವರು ಕಿರುಚಾಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕ ಹೇಳಿದರೂ, ಕೇಳದ ಯುವಕ ಗಲಾಟೆ ಮುಂದುವರೆಸಿದ್ದಾನೆ. ಈ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯುವಕನ ಪುಂಡಾಟವನ್ನು ಕಾರಿನಲ್ಲಿದ್ದವರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಲಾತಣಾದಲ್ಲಿ ಸಿಟಿಜನ್ಸ್​ ಮೂಮೆಂಟ್​ ಈಸ್ಟ್​ ಬೆಂಗಳೂರು ಎಂಬ ಹೆಸರಿನ ಖಾತೆ ಪೋಸ್ಟ್​ ಮಾಡಿದ್ದು, ವಿಡಿಯೋದಲ್ಲಿ ಯುವಕ ಗಾಜು ಒಡೆಯುವುದು ಮತ್ತು ಕಾರಿನಲ್ಲಿದ್ದ ಕುಟುಂಬ ಕಿರುಚಾಡಿದ್ದನ್ನು ಕಾಣಬಹುದು. ಕಾರು ಚಾಲಕ “ಕಾರು ಚಾಲ ಒಂದು ಸೆಕೆಂಡ್​ನಿಲ್ಲು, ಹೀಗೆಲ್ಲ ಮಾಡಬೇಡ. ಕಾರಿನಲ್ಲಿ ಮಗು ಇದೆ” ಎಂದು ಹೇಳಿದರೂ ಯುವಕ ಮಾತು ಕೇಳದೆ ತನ್ನ ಅಟ್ಟಹಾಸ ಮುಂದುವರೆಸಿದ್ದಾನೆ.

ಸ್ಥಳೀಯರು ಯುವಕನನ್ನು ತಡೆಯಲು ಯತ್ನಿಸಿದರೂ ಮಾತು ಕೇಳದೆ, ತನ್ನ ದರ್ಪ ತೋರಿಸಿದ್ದಾನೆ. ಟ್ವೀಟ್​ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ.532/2024 ಕಲಂ.126(2),324(4),351(2), r/w34 ಅಡಿಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಎಂದು ತಿಳಿದು ಬಂದಿದೆ.

Post a comment

No Reviews