
ಮುಂಬೈ: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಪ್ರಾಣ ಕಳೆದುಕೊಂಡ ಘಟನೆ ಮುಂಬೈನ ಮಿರಾ ರೋಡ್‌ನಲ್ಲಿ ನಡೆದಿದೆ. ಮುಂಬೈನ ಖಾಸಗಿ ಕಂಪನಿಯೊಂದು ತನ್ನ ಸಿಬ್ಬಂದಿಗೆ ಟರ್ಫ್ ಕ್ರಿಕೆಟ್ ಆಯೋಜನೆ ಮಾಡಿತ್ತು. ಈ ವೇಳೆ ಯುವಕನೋರ್ವ ಬ್ಯಾಟಿಂಗ್ ಮಾಡಿ ಭರ್ಜರಿ ಸಿಕ್ಸರ್ ಸಿಡಿಸಿದ್ದ. ಸಿಕ್ಸ್ ಸಿಡಿಸುತ್ತಿದ್ದಂತೆ ಹೃದಯಘಾತವಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದು ಮೃತಪಟ್ಟಿದ್ದಾನೆ.. ಘಟನೆಯ ಸಂಪೂರ್ಣ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
https://x.com/i/status/1797512310061437318
ಯುವಕ ಕ್ರಿಕೆಟ್ ಆಟವಾಡುವಾಗ ಬಿದ್ದು ಪ್ರಾಣ ಕಳೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ನು ಘಟನೆ ಬಗ್ಗೆ ಕಾಶಿಘೋನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈದಾನದಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಯುವಕರು..!
ಪ್ರಸ್ತುತ ಇಂತಹ ಘಟನೆಗಳು ನಮ್ಮ ಕಣ್ಣ ಮುಂದೆ ನಡೀತಾನೆ ಇದೆ. ಈ ಹಿಂದೆ ಕೂಡ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಹಲವಾರು ಯುವಕರು ಪ್ರಾಣ ಕೈಚೆಲ್ಲಿದ್ದಾರೆ. ಕಳೆದ ಜನವರಿಯಲ್ಲಿ ನೋಯ್ಡಾದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಯುವಕನೊಬ್ಬ ರನ್ ಗಳಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದ.
Poll (Public Option)

Post a comment
Log in to write reviews