
ರಾಮನಗರ: ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ದೊಡ್ಡಮುದವಾಡಿ ಗ್ರಾಮದ ಬಳಿ ನಡೆದಿದೆ.
ಇಂದು (ಸೆ.23) ಬೆಳ್ಳಂಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ್ದಾನೆ. ಡಿಕ್ಕಿಯಾಗಿರುವ ರಭಸಕ್ಕೆ ವಿನಯ್ (24) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅನಿಕೇತ್ ಎಂಬುವವನಿಗೆ ಗಂಭೀರ ಗಾಯಗಳಾಗಿವೆ.
ವಿನಯ್ ಮತ್ತು ಅನಿಕೇತ್ ಬೆಂಗಳೂರಿನ ಇಟ್ಟಮಡು ನಿವಾಸಿಗಳಾಗಿದ್ದಾರೆ, ವೀಕೆಂಡ್ ಹಿನ್ನೆಲೆ ರೆಸಾರ್ಟ್‌ಗೆ ಬಂದಿದ್ದರು, ರೆಸಾರ್ಟ್‌ನಿಂದ ಹಿಂತಿರುಗಿ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳುಗಳನ್ನು ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
Poll (Public Option)

Post a comment
Log in to write reviews