
ಹಾವೇರಿ : ಡೆಂಗ್ಯೂ ಜ್ವರಕ್ಕೆ ಮಹಿಳೆ ಮೃತ ಪಟ್ಟಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಮೃತ ಮಹಿಳೆ ಹಾನಗಲ್ ತಾಲೂಕಿನ ನರೇಗಲ್ಲ ಗ್ರಾಮದ ಗೌಸಿಯಾ (30) ಎಂದು ತಿಳಿದು ಬಂದಿದೆ. ಗೌಸಿಯಾ ಕಳೆದ ಎರಡು ದಿನದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕುಟುಂಬಸ್ಥರು ಮಹಿಳೆಯನ್ನು ಪಂಡಿತ್ ಆಸ್ಪತ್ರೆಗೆ ದಾಖಲಿಸಿದ್ದಾರೆ ತಪಾಸಣೆ ನಡೆಸಿದ ವೈದ್ಯರು ಗೌಸಿಯಾಗೆ ಡೆಂಗ್ಯೂ ಇರುವುದು ದೃಢಪಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಾಡದ ಆಸ್ಪೆತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಾಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಗೌಸಿಯಾ ಸಾವನ್ನಪಿದ್ದಾರೆ. ಆದರೆ ಡೆಂಗ್ಯೂನಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಇನ್ನೂ ದೃಢಪಡಿಸಿಲ್ಲ.
ಮತ್ತೊಂದೆಡೆ ಗೌಸಿಯಾ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಗೌಸಿಯಾ ಸಂಬಂಧಿಕರು ಆರೋಪ ಮಾಡಿದ್ದಾರೆ. ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಮಾಡಿದ ತಪ್ಪು ಮುಚ್ವಿಹಾಕಲು ಐವತ್ತು ಸಾವಿರ ಹಣ ನೀಡಲು ವೈದ್ಯರು ಮುಂದಾಗಿದ್ದರು ಎಂಬ ಮತ್ತೊಂದು ಆರೋಪ ಕೇಳಿ ಬಂದಿದ್ದು ಮಲ್ಲಾಡದ ಆಸ್ಪತ್ರೆಯ ವೈದ್ಯ ನೀಡಿದ ಹಣವನ್ನು ವಾಪಸ್ ನೀಡುತ್ತೇವೆ. ನಿನಗೆ ಒಂದು ಲಕ್ಷ ಹಣ ನೀಡುತ್ತೇವೆ, ನಮ್ಮ ಮಗಳ ಜೀವ ಕೊಡು ಎಂದು ಮೃತ ಗೌಸಿಯಾ ಸಂಬಂಧಿಕರು ಕಿಡಿಕಾರಿದ್ದಾರೆ. ರಾತ್ರಿ ಎರಡು ಗಂಟೆವರೆಗೂ ಆಸ್ಪತ್ರೆಯ ಮುಂದೆ ಜನರು ಜಮಾಯಿಸಿದ್ದು ಆಸ್ಪತ್ರೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
Poll (Public Option)

Post a comment
Log in to write reviews