
ಉಡುಪಿ : ರಾಜ್ಯದ ಹಲವೆಡೆ ವರುಣಾರ್ಭಟ ವಿತಿ ಮೀರಿದ್ದು ನಿನ್ನೆ (ಜುಲೈ 4)ರಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆ ಹಳ್ಳಿ ಬೇರು ನಿವಾಸಿ ಅಂಬಾ ಎಂದು ತಿಳಿದು ಬಂದಿದೆ. ನಿರಂತರ ಮಳೆಯಿಂದ ಅಂಬಾ ಅವರ ಮನೆ ಹಿಂಬದಿಯ ಗುಡ್ಡ ನಿನ್ನೆ ಏಕಾಏಕಿಯಾಗಿ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿ. ಸ್ಥಳೀಯರ ಸಹಾಯದಿಂದ ಮಣ್ಣು ತೆಗೆದುಹಾಕಿ ಮೃತದೇಹವನ್ನ ಹೊರತೆಗೆಯಲಾಗಿದೆ. ಸ್ಥಳಕ್ಕೆ ಕೊಲ್ಲೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Poll (Public Option)

Post a comment
Log in to write reviews