
ಬೆಂಗಳೂರು :ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಕೆಂಗೇರಿಯ ಉಲ್ಲಾಳ ಸಮೀಪದ 100 ಅಡಿ ರಸ್ತೆಯಲ್ಲಿ ನಡೆಯಿತು. ಸೊನ್ನೇನಹಳ್ಳಿಯ ಮಾರುತಿ ನಗರದ ನಿವಾಸಿ ಮೋನಿಕಾ (25) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದದಿದೆ.
ಉಲ್ಲಾಳ ಸಮೀಪದ ರಿಂಗ್ ರಸ್ತೆಯಲ್ಲಿರುವ ಶೋರೂಂವೊಂದರ ಹೆಚ್.ಆರ್.(ಮಾನವ ಸಂಪನ್ಮೂಲ ಅಧಿಕಾರಿ) ಆಗಿದ್ದ ಮೋನಿಕಾ, ಎಂದಿನಂತೆ ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸ್ಕೂಟರ್‌ಗೆ ಮುಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ಮೋನಿಕಾ ಮೈಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಾಮಗಾರಿ ನಡೆಯುತ್ತಿದ್ದ ಕಾರಣ ರಸ್ತೆಯ ಒಂದೇ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಈ ಅಪಘಾತದ ನಂತರ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
Poll (Public Option)

Post a comment
Log in to write reviews