2024-09-19 04:31:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ಲಾಸ್ಟಿಕ್‌ ತ್ಯಾಜ್ಯ ತಿನ್ನುತ್ತಿರುವ ಕಾಡಾನೆ

ಕೇರಳ: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಅರಣ್ಯಪ್ರದೇಶದಲ್ಲಿ ಪಡಯಪ್ಪ ಕಾಡಾನೆ ಪ್ಲಾಸ್ಟಿಕ್ ರಾಶಿಯಲ್ಲಿ ಬಿದ್ದಿದ್ದ ತರಕಾರಿ ತ್ಯಾಜ್ಯವನ್ನು ಸೇವಿಸುತ್ತಿರುವ ಆಘಾತಕಾರಿ ವಿಡಿಯೋ ಬೆಳಕಿಗೆ ಬಂದಿದೆ.  ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಅರಣ್ಯಪ್ರದೇಶ ಪ್ರವಾಸಿಗರಿಗೆ ಸೂಕ್ತವಾದ ಸ್ಥಳ ಮುನ್ನಾರ್‌ ಪ್ರದೇಶದಲ್ಲಿ  ಸಂಚರಿಸುವಾಗ ಪ್ರವಾಸಿಗರು ರಸ್ತೆ ಬದಿಯಲ್ಲೇ ವನ್ಯಜೀವಿಗಳ ವೀಕ್ಷಿಸುತ್ತಾರೆ. ಇದೇ ವೇಳೆ, ಪ್ರವಾಸಿಗರು ಅಲ್ಲಿನ ಪರಿಸರನ್ನ ಹಾಳುಮಾಡುತಿದ್ದಾರೆ ಎಲ್ಲೆಂದರಲ್ಲಿ ತ್ಯಾಜ್ಯವನ್ನ ಬಿಸಾಡುತಿದ್ದಾರೆ. ಪ್ರವಾಸಿಗರು ಪರಿಸರದ ಬಗ್ಗೆ ಯೋಚಿಸದೆ ಉಪಯೋಗಿಸಿದ ಪ್ಲಾಸ್ಟಿಕ್ ಗಳನ್ನು ಎಲ್ಲೆಂದರಲ್ಲಿ ಮನಬಂದಂತೆ ಬಿಸಾಡುತ್ತಾರೆ. ಸ್ಥಳಿಯ ಆಡಳಿತ ಮಂಡಳಿ ಕಸ ವಲೇವಾರಿ ಸಂಗ್ರಹಿಸಿದೆ ತ್ಯಾಜ್ಯಹೆಚ್ಚಾಗಿದೆ ಹಾಗಾಗಿ ಆ ತ್ಯಾಜ್ಯವನ್ನು ಕಾಡಾನೆ ಸೇರಿದಂತೆ ಹಲವು ವನ್ಯ ಜೀವಿಗಳು ಇದನ್ನ ಸೇವಿಸುತ್ತಿವೆ. ಪಡಯಪ್ಪ ಕಾಡಾನೆ ಪ್ಲಾಸ್ಟಿಕ್ ತಿನ್ನುವ ದೃಶ್ಯವನ್ನು ಅರಣ್ಯ ಸಂರಕ್ಷಣಾ ಕಾರ್ಯಕರ್ತರು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ.  ಸಂಬಂಧಪಟ್ಟ ಅಧಿಕಾರಿ ವರ್ಗದವರು ತ್ಯಾಜ್ಯ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಬೇಸರದ ಸಂಗತಿ ಎಂದು ಅರಣ್ಯ ಸಂರಕ್ಷಣಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸೇವನೆಯಿಂದ ವನ್ಯಜೀವಿಗಳ ಆರೋಗ್ಯಕ್ಕೆ ಅಪಾಯ ಉಂಟುವಾಗುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಂರಕ್ಷಣಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮುನ್ನಾರ್‌ ಅರಣ್ಯ ಪ್ರದೇಶದಲ್ಲಿ ಪಡಯಪ್ಪ ಕಾಡಾನೆ ಆಗಾಗ್ಗೆ ಸಾರ್ವಜನಿಕ ಸ್ಥಳಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತದೆ. ಆಹಾರಕ್ಕಾಗಿ ವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತದೆ. ಕೆಲವೊಮ್ಮೆ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿ ಮಾಡುತ್ತದೆ. ಈ ಸಂದರ್ಭದಲ್ಲಿ ಆಹಾರ ಅರಸಿ ಬಂದ ಕಾಡಾನೆಯು ಮುನ್ನಾರ್ ಸಮೀಪದ ಕಲ್ಲರ್ ಪ್ರದೇಶದಲ್ಲಿ ಕಸ ಮತ್ತು ತರಕಾರಿ ತ್ಯಾಜ್ಯ ವಿಂಗಡಣೆ ಮಾಡುವ ಸ್ಥಳಕ್ಕೆ ಲಗ್ಗೆ ಇಟ್ಟಿದೆ. ಈ ವೇಳೆ, ಪ್ಲಾಸ್ಟಿಕ್​ ಕವರ್​​ಗಳಲ್ಲಿ ಸುತ್ತಿ ಎಸೆದ ತರಕಾರಿ ತ್ಯಾಜ್ಯವನ್ನು ಸೇವಿಸಿದೆ. ಇದೀಗ ಇದರ ವಿಡಿಯೋ ದೃಶ್ಯಾವಳಿ ವೈರಲ್​ ಆಗಿವೆ. ಮತ್ತೊಂದೆಡೆ, ಈ ಪ್ರದೇಶದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಿದೆ. ನಿತ್ಯವೂ ಆನೆಗಳ ಭಯದಿಂದಲೇ ಕೆಲಸಕ್ಕೆ ಹೋಗುವಂತಾಗಿದೆ ಎಂದು ತೋಟದ ಕಾರ್ಮಿಕರು ಹೇಳುತ್ತಾರೆ. ಆದ್ದರಿಂದ ಆನೆಗಳನ್ನು ಕಾಡಿಗೆ ಓಡಿಸಲು ಅರಣಾಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

Post a comment

No Reviews