ಗಣಿತದಲ್ಲಿ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಕೋಚಿಂಗ್ ಸೆಂಟರ್ನ ವಾರ್ಡನ್
ವಿಜಯಪುರ: ಗಣಿತ ವಿಷಯದ ಪರೀಕ್ಷೆಯಲ್ಲಿ ಕಡಿಮೆ ಆಂಕ ಪಡೆದ ಎಂಬ ಕಾರಣದಿಂದ ವಿಜಯಪುರ ನಗರದ ಕೋಚಿಂಗ್ ಸೆಂಟರ್ನ ವಾರ್ಡನ್ ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಹೊರ ಭಾಗದಲ್ಲಿರೋ ಎಕ್ಷಲೆಂಟ್ ಕೋಚಿಂಗ್ ಸೆಂಟರ್ ನಲ್ಲಿ ಘಟನೆ ನಡೆದಿದೆ.
ಕೋಚಿಂಗ್ ಪಡೆಯುತ್ತಿದ್ದ ದಾವಣಗೆರೆ ಮೂಲದ ವಿದ್ಯಾರ್ಥಿ ಮೇಲೆ ವಾರ್ಡನ್ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿ ಗಣಿತ ವಿಷಯದ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರೋ ಕಾರಣ ವಿದ್ಯಾರ್ಥಿಯ ತೊಡೆಭಾಗ ಹಾಗೂ ಬೆನ್ನಿನ ಮೇಲೆ ವಾರ್ಡನ್ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ವಿದ್ಯಾರ್ಥಿಗೆ ಕುಳಿತುಕೊಳ್ಳಲೂ ಆಗುತ್ತಿಲ್ಲ. ಈ ಕೋಚಿಂಗ್ ಸೆಂಟರ್ ನಲ್ಲಿ ಈ ಹಿಂದೆಯೂ ಹಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿದೆ.
ಇನ್ನು ಕೋಚಿಂಗ್ ಸೆಂಟರ್ ಮುಖ್ಯಸ್ಥ ಬಸವರಾಜ ಕವಲಗಿ ವಿದ್ಯಾರ್ಥಿ ಮೇಲೆ ವಾರ್ಡನ್ ಹಲ್ಲೆ ಮಾಡಿರೋ ವಿಚಾರ ಗೊತ್ತಿಲ್ಲವೆಂದಿದ್ಧಾರೆ. ಘಟನೆ ಕಾರಣ ವಿದ್ಯಾರ್ಥಿಯನ್ನು ಆತನ ಪೋಷಕರು ದಾವಣಗೆರೆಗೆ ವಾಪಸ್ ಕರೆದುಕೊಂಡು ಹೋಗಿದ್ದು ಅಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಕುರಿತು ದಾವಣಗೆರೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ತೀರ್ಮಾಣ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.
Post a comment
Log in to write reviews