ಟಾಪ್ 10 ನ್ಯೂಸ್
ಮರ್ಡರ್ ಕೇಸ್‌ಗೆ ಟ್ವಿಸ್ಟ್ – ಫ್ರಿಡ್ಜ್ ಮೇಲೆ ಬೆರಳಚ್ಚು ಗುರುತು ಪತ್ತೆ…!

ಇಡೀ ಬೆಂಗಳೂರು ಜನತೆಯನ್ನೇ ಬೆಚ್ಚಿ ಬೀಳಿಸಿದ ಒಂಟಿ ಮಹಿಳೆ ಮಹಾಲಕ್ಷ್ಮಿ ಹತ್ಯೆ ಪ್ರಕರಣ ಸಂಬಂಧ ವೈದ್ಯರಿಂದು ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದೆಡೆ ವೈಯಾಲಿಕಾವಲ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಭಯಾನಕ ಸತ್ಯಗಳನ್ನು ಬಯಲಿಗೆಳೆಯುತ್ತಿದ್ದಾರೆ. ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಇನ್ನೂ ಮಧ್ಯೆ ಪೊಲೀಸರ ತನಿಖೆಯಲ್ಲಿ, ಫ್ರಿಡ್ಜ್ ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಇದರಿಂದ ಮಹಾಲಕ್ಷ್ಮಿ ಮರ್ಡರ್ ಹಿಂದೆ ಹಂತಕ ಒಬ್ಬನೆ ಇದ್ದಾನಾ? ಅಥವಾ ಇಬ್ಬರು ಇದ್ದಾರಾ ಅನ್ನೋ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಎಫ್‌ಎಸ್‌ಎಲ್ ತಜ್ಞರು ಶೋಧ ಮುಂದುವರಿಸಿದ್ದಾರೆ.
Poll (Public Option)

Post a comment
Log in to write reviews