
ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಆ್ಯಸಿಡ್ ಟ್ಯಾಂಕರ್‌ವೊಂದು ಕಾಲುವೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿ ನಿನ್ನೆ ಶುಕ್ರವಾರ ಸಾಯಂಕಾಲ ನಡೆದಿದೆ.
ಆಂಧ್ರದಿಂದ ಗೋವಾದತ್ತ ಸಲ್ಪರಿಕ್ ಆ್ಯಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಅಂಚಿಗೆ ಪಲ್ಪಿಯಾಗಿದೆ. ಈ ಆಕಸ್ಮಿಕ ರಸ್ತೆ ಅವಘಡದಲ್ಲಿ ಸ್ವಲ್ಪರಿಕ್ ಆಸಿಡ್ ತುಂಬಿದ್ದ ಟ್ಯಾಂಕರ್ , ಲಾರಿ ಕ್ಯಾಬಿನ್ ನಿಂದ ಬೇರ್ಪಟ್ಟು ,ಜಖಂಗೊಂಡು ಸೋರಿಕೆಯಾಗಲಾರಂಭಿಸಿದೆ. ಸುದ್ದಿ ತಿಳಿದ ಅಗ್ನಿಶಾಮಕ , ಪೊಲೀಸ್ ಮತ್ತಿತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ಕೈಗೊಂಡು ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದ್ದಾರೆ.
ಈ ವೇಳೆ ಕೆಲಕಾಲ ಹುಬ್ಬಳ್ಳಿ – ಅಂಕೋಲಾ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸಲ್ಫರಿಕ್ ಆಸಿಡ್ ಮಾನವ ಇಲ್ಲವೇ ಇತರೇ ಜಾನುವಾರುಗಳ ಅಂಗಾಂಗಗಳಿಗೆ ತಗುಲಿದರೆ ಸುಡುತ್ತದೆ ಇಲ್ಲವೇ ಇನ್ನಿತರೆ ರೀತಿಯ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸುಮಾರು 30 ಕ್ಕೂ ಹೆಚ್ಚು ಟನ್ ಪ್ರಮಾಣದ ಆಸಿಡ್ ನ್ನು ಅಪಾಯವಾಗದಂತೆ ಹರಿಯಬಿಡುವುದು ಸವಾಲಿನ ಕೆಲಸವಾಗಿತ್ತು.
ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಈಗ ಹೆದ್ದಾರಿಯು ಸಂಚಾರಕ್ಕೆ ಮುಕ್ತವಾಗಿದೆ. ಇತರೆ ವಾಹನಗಳು ಹೆದ್ದಾರಿ ಸಂಚಾರದ ವೇಳೆ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕಿದೆ. ಆಸಿಡ್ ಲಾರಿ ರಸ್ತೆ ಅಪಘಾತದಲ್ಲಿ ಅದೇ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯ ನೋವುಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Poll (Public Option)

Post a comment
Log in to write reviews