
ಬೆಳಗಾವಿ: ಸರ್ಕಾರಿ ಶಾಲಾ ಆವರಣದಲ್ಲಿದ್ದ ಬೃಹತ್ ಗುಂಡಿಯೊಂದಕ್ಕೆ ಬಿದ್ದು ವಿದ್ಯಾರ್ಥಿ ಸಾವಿನ ದವಡೆಯಿಂದ ಪಾರಾದ ಘಟನೆ ಇಂದು ನಡೆದಿದೆ.
ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದ ಶಾಲಾ ಆವರಣದಲ್ಲಿ ವಿವಿಧ ಕಾಮಗಾರಿಗೆಂದು ಮಣ್ಣು ತೆಗೆದು ಬೃಹತ್ ಗುಂಡಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಆ ಗುಂಡಿಗೆ ನೀರು ತುಂಬಿ ಕೆರೆಯಂತೆ ಮಾರ್ಪಾಡಾಗಿತ್ತು. ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಯೋರ್ವ ಆಟವಾಡುವ ಭರದಲ್ಲಿ ಆ ಗುಂಡಿಯೊಳಗೆ ಬಿದ್ದು ಮುಳುಗುತ್ತಿದ್ದ ವೇಳೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಯನ್ನು ಹೊರತೆಗಿದ್ದಾರೆ. ಆ ಮೂಲಕ ಸಾವಿನ ಅಂಚಿನಲ್ಲಿದ್ದ ವಿದ್ಯಾರ್ಥಿಯನ್ನು ಪಾರು ಮಾಡಿದ್ದಾರೆ.
ಈ ಬೃಹತ್ ಗುಂಡಿ ಮುಚ್ಚಲು ಕಳೆದ 5 ತಿಂಗಳ ಹಿಂದೆಯೇ ಅರ್ಜಿ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲಾ, ಇದರಿಂದಾಗಿ ಈ ಅನಾಹುತ ಸಂಭವಿಸಿದೆ, ಮುಂದೆ ಯಾವುದೇ ಸಾವು ನೋವು ಆಗುವ ಮೊದಲು ಈ ಗುಂಡಿ ಮುಚ್ಚಿ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews