
ಬೀದರ್: ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಂದಿಗೆ ಶಿಕ್ಷಕರೊಬ್ಬರು ಮೃಗೀಯ ವರ್ತನೆ ತೋರಿರುವ ಘಟನೆ ನಿಟ್ಟೂರ ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದವರೆಲ್ಲಾ ಶಿಕ್ಷಕನನ್ನು ಶಪಿಸುತ್ತಿದ್ದಾರೆ.
ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿ ʻವೀರಪ್ಪ ಸಂತೋಷ್‌ಕುಮಾರ ನಿಡೋದಾʼ ಎಂಬುವವನ ಮೇಲೆ ಶಿಕ್ಷಕ ಜೈಶಂಕರ್ ಬರೆ ಹಾಕಿದ್ದಾರೆ.
ವಿದ್ಯಾರ್ಥಿಯ ಬೆನ್ನು, ಕೈ, ತೊಡೆ ಮೇಲೆ ಮನಸ್ಸೋ ಇಚ್ಛೆ ಬರೆ ಬರುವಂತೆ ಭಾರಿಸಿದ್ದಾನೆ. ಹಿಗಾಗಿ ಶಿಕ್ಷಕನ ವಿರುದ್ಧ ವಿದ್ಯಾರ್ಥಿ ವಿಡಿಯೋದಲ್ಲಿ ತನ್ನ ನೋವನ್ನ ಹೇಳಿಕೊಂಡಿದ್ದಾನೆ. ಕೂಡಲೆ ಈ ಶಿಕ್ಷಕನ ಮೇಲೆ ಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ್ ಹುಸೇನ್ ಶಾಲಾ ಮಂಡಳಿಗೆ ಆದೇಶಿಸಿದ್ದಾರೆ.
Poll (Public Option)

Post a comment
Log in to write reviews