
ಮೈಸೂರು : ಟೆಸ್ಟ್‌ನಲ್ಲಿ ಕಡಿಮೆ ಅಂಕ ಪಡೆದಿದ್ದಾಳೆಂದು ಕಾಲೇಜು ಮುಖ್ಯಸ್ಥರು ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿರುವ ಘಟನೆ ಫಾರೂಕಿಯಾ ಡೆಂಟಲ್ ಕಾಲೇಜಿನಲ್ಲಿ ನಡೆದಿದೆ.
ಲಷ್ಕರ್ ಮೊಹಲ್ಲಾ ವಾಸಿ ಮೆಹಕ್ (19) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಫಾರೂಕಿಯಾ ಡೆಂಟಲ್ ಕಾಲೇಜಿನಲ್ಲಿ ಲಾ ಟೆಕ್ನೀಷಿಯನ್ ಕೋರ್ಸ್ ಓದುತ್ತಿದ್ದಳು. ಅಂಕ ಕಡಿಮೆ ಪಡೆದಿದ್ದಾಳೆ ಎಂದು ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿನಿಯ ಪೋಷಕರ ಬಳಿ ಹೇಳಿದ್ದನ್ನೇ ಮನಸ್ಸಿಗೆ ತೆಗೆದುಕೊಂಡ ವಿದ್ಯಾರ್ಥಿನಿ, ನಾನು ಸರಿಯಾಗಿ ಓದಿದ್ದರೂ ದೂರು ನೀಡಿದ್ದಾರೆಂದು ಬೇಸತ್ತು ಅದೇ ಕಾಲೇಜಿನ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ.
ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews