
‘ಟಾಕ್ಸಿಕ್’ (Toxic Film) ಸಿನಿಮಾ ಪಯಣ ಶುರುವಾಗಿದೆ ಎಂದು ಬೆಳ್ಳಂಬೆಳಗ್ಗೆ ಚಿತ್ರ ನಟ ಯಶ್ (Yash) ಮುಂದಿನ ಸಿನಿಮಾ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಕನಸಿನ ಪ್ರಾಜೆಕ್ಟ್ ‘ಟಾಕ್ಸಿಕ್’ ಚಿತ್ರಕ್ಕೆ ಇಂದು (ಆಗಸ್ಟ್ 08) ಸರಳವಾಗಿ ಚಾಲನೆ ನೀಡಿದ್ದಾರೆ.
ಮೊನ್ನೆಯಷ್ಟೇ (ಆ.6) ಉಜಿರೆಯ ಸೂರ್ಯ ದೇವಸ್ಥಾನದಲ್ಲಿ ಯಶ್ ದಂಪತಿ ಮತ್ತು ಕೋ ಪ್ರೊಡ್ಯೂಸರ್ ವೆಂಕಟ್ ಕೋಣಂಕಿ ಸ್ಟ್ರಿಪ್ಟ್ ಪೂಜೆ ಮಾಡಿದ್ದರು. ಈ ಬೆನ್ನಲ್ಲೇ ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಈ ವೇಳೆ, ಹಾಲಿವುಡ್ ತಂತ್ರಜ್ಞರು ಮತ್ತು ಚಿತ್ರತಂಡ ಹೊರತಾಗಿ ಬೇರೆ ಗಣ್ಯರಿಗೆ ಅವಕಾಶವಿರಲಿಲ್ಲ.
ಇನ್ನೂ ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಯಶ್ ನಟನೆಯ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಯಶ್ ಹೊಸ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಕ್ಕಿರುವ ವಿಷ್ಯ ತಿಳಿದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇನ್ನೇನು ಸಿನಿಮಾಗಾಗಿ ಎದುರು ಕಾಯ್ತಿದ್ದಾರೆ.
Poll (Public Option)

Post a comment
Log in to write reviews