ಬೆಂಗಳೂರು : ಹಿರಿಯ ಪೊಲೀಸ್ ಸಿಬ್ಬಂದಿ ASI ಲೊಕೇಶಪ್ಪ ಅವರು ನೂರಾರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾಗಿದ್ದಾರೆ. ಬೆಂಕಿ ದುರಂತದಲ್ಲಿ ಮಗಳನ್ನು ಕಳೆದುಕೊಂಡ ASI ಬಡಮಕ್ಕಳಿಗೆ ಶಾಲಾ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.
ಆರಂಭದಲ್ಲಿ ASI ಒಂದು ಶಾಲೆಯಿಂದ ಶುರುಮಾಡಿದ್ದರು. ಇದೀಗ ಸುಮಾರು 600 ಬಡ ಮಕ್ಕಳಿಗೆ ಶಾಲಾ ಸಾಮಾಗ್ರಿಗಳ ಒದಗಿಸುತ್ತಿದ್ದಾರೆ. ತನ್ನ ಎರಡು ತಿಂಗಳ ಸಂಬಳವನ್ನು ಬಡಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಮುಡಿಪಾಗಿಟ್ಟಿದ್ದಾರೆ. ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಲೊಕೇಶಪ್ಪ ಅವರು ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. 2019 ರಲ್ಲಿ ಬೆಂಕಿ ಅವಘಡದಲ್ಲಿ ಲೊಕೇಶಪ್ಪ ಅವರು ತನ್ನ ಮಗಳು ಹರ್ಷಾಲಿಯನ್ನು ಕಳೆದುಕೊಂಡಿದ್ದರು.ಮಗಳ ಸಾವಿನ ಬಳಿಕ ಹಿರಿಯ ಸಿಬ್ಬಂದಿ ಬಡಮಕ್ಕಳಿಗೆ ಶಾಲಾ ಸಾಮಾಗ್ರಿಗಳನ್ನು ನೀಡಲು ನಿರ್ಧಾರ ಮಾಡಿದ್ದಾರೆ. ತನ್ನ ಮಗಳ ನೆನಪಿನಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ASI ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣ ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ನೀಡಲು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಿಂದ ಆರು ಶಾಲೆಗಳ ಬಡ ಮಕ್ಕಳಿಗೆ ಶಾಲಾ ಸಾಮಗ್ರಿಗಳಿಗೆ ಧನಸಹಾಯ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ 1 ಶಾಲೆ, ಮೈಸೂರಿನಲ್ಲಿ 1 ಹಾಗೂ ಹಾಸನದ 4 ಶಾಲೆಯ ಬಡಮಕ್ಕಳಿಗೆ ನೆರವಾಗಿದ್ದಾರೆ. 1 ರಿಂದ 8ನೇ ತರಗತಿಯ 600 ಮಕ್ಕಳಿಗೆ ಸಾಮಗ್ರಿ ನೀಡಿ ಸಹಾಯ ಮಾಡಿದ್ದಾರೆ. ಲೊಕೇಶಪ್ಪ ಅವರ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ತನ್ನ ಮಗಳ ಹೆಸರಿನಲ್ಲಿ NGO ಸ್ಥಾಪನೆ ಮಾಡಿದ್ದಾರೆ. ಸದ್ಯ ASI ಅವರ ಕೆಲಸಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗಿದೆ.
Post a comment
Log in to write reviews