
ತಮಿಳುನಾಡು: ಗಾನ ಕೋಗಿಲೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲೆಕ್ಕವಿದಷ್ಟು ಹಾಡುಗಳನ್ನು ಹಾಡಿದ್ದಾರೆ. ಸೈ ಎನಿಸಿಕೊಂಡಿದ್ದಾರೆ. ಆದರೆ ಇಂದು ನಮ್ಮ ಜೊತೆಗೆ ಇಲ್ಲ. ಆದರೆ, ಅವರು ಹಾಡಿರುವ ಎಲ್ಲಾ ಹಾಡುಗಳು ಎವರ್ಗ್ರೀನ್ ಆಗಿವೆ.
ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನ ರಸ್ತೆ ಒಂದಕ್ಕೆ ಎಸ್ಪಿಬಿ ಅವರ ಹೆಸರನ್ನು ಇಟ್ಟಿದ್ದಾರೆ. ನಾಲ್ಕನೇ ಪುಣ್ಯತಿಥಿ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ. ಐದು ದಶಕಗಳ ಕಾಲ ಎಸ್ಪಿಬಿ ಅವರು ಚಿತ್ರರಂಗದಲ್ಲಿ ಇದ್ದರು. ಅವರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 16 ಭಾಷೆಗಳ ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಅವರ ಧ್ವನಿಗೆ ಮಾರು ಹೋಗದವರೇ ಇಲ್ಲ. ಒಂದೇ ದಿನ ಹಲವು ಹಾಡುಗಳನ್ನು ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದಾರೆ. ಸೆಪ್ಟೆಂಬರ್ 25ರಂದು ಅವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಹೀಗಾಗಿ ಈ ಘೋಷಣೆ ಮಾಡಲಾಗಿದೆ.
ಎಸ್ಪಿಬಿ ವಾಸ ಇದ್ದ ನುಂಗಂಬಾಕ್ಕಂ ಕಾಮ್ದಾರ್ ನಗರದ ಮುಖ್ಯರಸ್ತೆಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ಸಲಾಯಿ ಎಂದು ನಾಮಕರಣ ಮಾಡಲಾಗಿದೆ ತಿಳಿಸಿದ್ದಾರೆ.
Poll (Public Option)

Post a comment
Log in to write reviews