
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಿವೇದಿತಾ ಗೌಡ, ಚಂದನ್ ಶೆಟ್ಟಿ ವಿಚ್ಛೇದನದ ಸುದ್ದಿಯಿಂದ ಶಾಕ್ ಒಳಗಾಗಿದ್ದ ಚಂದನವನಕ್ಕೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನದ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಆರು ತಿಂಗಳಿನಿಂದ ಯುವರಾಜ್ ಕುಮಾರ್ ದಂಪತಿ ಪ್ರತ್ಯೇಕವಾಗಿ ವಾಸಮಾಡುತ್ತಿದ್ದರು. ಇದೀಗ ಸಣ್ಣ ಪುಟ್ಟ ಮನಸ್ತಾಪ ಮೂಡಿರುವ ಹಿನ್ನಲೆಯಲ್ಲಿ ಇಬ್ಬರೂ ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ 2019, ಮೇ 26ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.ಈಗ ಅಧಿಕೃತವಾಗಿ ವಿಚ್ಚೇಧನ ಪಡೆಯಲು ದಂಪತಿ ನಿರ್ಧಾರ ಮಾಡಿದ್ದು, ಎಂ ಸಿ ಆಕ್ಟ್ ಸೆಕ್ಷನ್ (13 (1) (ia) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಮೈಸೂರು ಮೂಲದ ಶ್ರೀದೇವಿ ಕಳೆದ 6-7 ತಿಂಗಳಿಂದ ದೊಡ್ಮನೆ ಕುಟುಂಬದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಶ್ರೀದೇವಿ ಅಣ್ಣಾವ್ರ ಕುಟುಂಬದ ಒಡೆತನದ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡು ನಿರ್ವಹಣೆ ಮಾಡುತ್ತಿದ್ದರು. ಒಂದು ವರ್ಷದಿಂದ ದಂಪತಿ ನಡುವೆ ಕಲಹ ನಡೆಯುತ್ತಿದೆ ಎನ್ನಲಾಗಿದೆ. ದಂಪತಿಗಳ ಕಲಹದ ಬಗ್ಗೆ ಎರಡೂ ಕುಟುಂಬದಿಂದ ಆಗಿರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ನಡೆದಿದೆ ಆದರೆ ಇದೀಗ ವಿಚ್ಛೇದನದ ಮಾತು ಕೇಳಿಬಂದಿದೆ.
Poll (Public Option)

Post a comment
Log in to write reviews