
ಮೈಸೂರು: ನಗರದಲ್ಲಿ ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಲವಾಲ ಪೊಲೀಸ್ ಠಾಣೆಯಲ್ಲಿ 64 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಬಂಧಿತರನ್ನು ಮೈಸೂರು, ಮಡಿಕೇರಿ, ಬೆಂಗಳೂರು, ತಮಿಳುನಾಡು ಮೂಲದವರು ಎನ್ನಲಾಗುತ್ತಿದ್ದು, ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕೆಆರ್‌ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಎಂಬಾತನಿಂದ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಪಾರ್ಟಿ ಆಯೋಜಿಸಿದ್ದರು. ಇನ್ನು ಪಾರ್ಟಿಗೆ ಅಧಿಕೃತವಾಗಿ ಅನುಮತಿ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅಪ್ಲೋಡ್ ಮಾಡಿದ್ದರು. ಇದನ್ನು ನಂಬಿ 50ಕ್ಕೂ ಹೆಚ್ಚು ಜೋಡಿ ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ತಲಾ 2 ಸಾವಿರ ವಸೂಲಿ ಮಾಡಿ, ಇಸ್ರೇಲ್‌ನಿಂದ ರ್ಯಾ ಪರ್ ಗ್ರೇನ್ ರಿಪ್ಪರ್ ಕರೆಸಿದ್ದರು. ಪೊಲೀಸರಿಂದ ಯಾವುದೇ ಅನುಮತಿ ಪಡೆಯದೆ ಖುಲ್ಲಂ ಖುಲ್ಲಾ ಮಸ್ತಿಯಲ್ಲಿ ತೊಡಗಿದ್ದರು. ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಎಸ್ಪಿಗೆ ಮಾಹಿತಿ ನೀಡಲಾಗಿದೆ. ಮೈಸೂರು ಎಸ್ಪಿ ಆದೇಶದಂತೆ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ನೇತೃತ್ವದಲ್ಲಿ ರೇವ್ ಪಾರ್ಟಿ ಮೇಲೆ ರೇಡ್ ಮಾಡಲಾಗಿದೆ.
Poll (Public Option)

Post a comment
Log in to write reviews