ಸೀಸನ್ 11ರ ಬಿಗ್ ಬಾಸ್ ಮನೆ ರಣರಂಗವಾಗಿದ್ದು, ಕೆಲ ಸ್ಪರ್ದಿಗಳೆಲ್ಲ ಲಾಯರ್ ಜಗದೀಶ್ ಮೇಲೆ ಮುಗಿಬೀಳುತ್ತಿದ್ದಾರೆ. ಗಲಾಟೆ ಅತಿರೇಕವಾಗಿ ಅವಾಚ್ಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವುದೇ ಊಹೆ ಮಾಡೋಕೆ ಆಗುತ್ತಿಲ್ಲ. ಅವರು ಆಡಿದ ಕೆಲ ಮಾತುಗಳು ವೀಕ್ಷಕರಿಗೆ ಬೇಸರ ಉಂಟು ಮಾಡಿದೆ. ಜಗದೀಶ್ ಅವರಿಗೆ ಸೀರೆ ಕೊಡುತ್ತೀನಿ ಹುಟ್ಕೋ ಎಂದು ಹೇಳಲಾಗಿದೆ.
ಬಿಗ್ ಹೌಸ್ನಲ್ಲಿ ಹೆಣ್ಮುಕ್ಕಳ ಬಗ್ಗೆ ಮಾತನಾಡಿದ್ದಕ್ಕೆ ಗಲಾಟೆ ಆರಂಭವಾಗಿದ್ದು. ಗೋಲ್ಡ್ ಸುರೇಶ್ ಮಹಿಳೆಯರ ಬಗ್ಗೆ ಮಾತನಾಡಬೇಡ ಎಂದಿದ್ದಾರೆ. ಇದಕ್ಕೆ ಫುಲ್ ಗರಂ ಆಗಿರುವ ಜಗದೀಶ್ ನಾನು ಮಾತನಾಡುತ್ತೇನೆ, ಏನೋ ಇವಾಗ? ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಜಗದೀಶ್ ಮೇಲೆ ಚೈತ್ರಾ, ಮಾನಸ ಸೇರಿ ಕೆಲವು ಮುಗಿಬಿದ್ದಿದ್ದಾರೆ.
ತಾಕತ್ ಇದ್ದರೇ ಏನ್ ಮಾಡ್ಕೊಂತಿಯಾ ಮಾಡ್ಕೊ ಹೋಗು ಎಂದು ಚೈತ್ರಾಗೆ ಜಗದೀಶ್ ಗದರಿದ್ದಾನೆ. ಕೈಕೈ ಮಿಲಾಯಿಸುವ ಮಟ್ಟಿಗೆ ಎಲ್ಲರು ಗುಂಪಾಗಿ ಜಗಳ ಮಾಡಿದ್ದಾರೆ. ಆಗ ನಿನ್ನಂತವರನ್ನು ಎಷ್ಟು ಜನ ನೋಡಿಲ್ಲ. ಎಂದು ಜಗದೀಶ್ ಮಾನಸ ನೋಡಿಕೊಂಡು ಹೇಳುತ್ತಾರೆ. ಇದಕ್ಕೆ ಸೀರೆ ಕೊಡ್ತೀನಿ ಉಟ್ಕೋ ಮತ್ತೆ ಎಂದು ಜಗದೀಶ್ಗೆ ಹೇಳಿದ್ದಾರೆ. ಇದೇ ವೇಳೆ ಹಂಸಾ ಅವರು ಹೆಂಗಸು ಆಗೋಕೆ ಯೋಗ್ಯತೆ ಇಲ್ಲ ಅವನಿಗೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ಗಟ್ಟಿಧ್ವನಿಯಲ್ಲಿ ಮಾನಸಗೆ ಹೋಗಲೇ ಎಂದಿದ್ದಾರೆ. ಇದರಿಂದ ತೀವ್ರ ಕೋಪದಲ್ಲೇ ಬಿಗ್ಬಾಸ್ ಕ್ಯಾಮೆರಾ ಮುಂದೆ ಬಂದ ಹಂಸಾ ಅವರು ಇದಕ್ಕೆ ಏನಾದರೂ ಸಲ್ಯೂಷನ್ ಬೇಕೆಬೇಕು ಎಂದು ಕೇಳಿದ್ದಾರೆ.
Post a comment
Log in to write reviews