
ರಾಮನಗರ: ಪ್ರಾಧ್ಯಾಪಕರುರೊಬ್ಬರು ವಾಟ್ಸ್‌ಪ್ ನಲ್ಲಿ ಬಂದ ಹೂಡಿಕೆ ಲಿಂಕ್ ಕ್ಲಿಕ್ ಮಾಡಿ 12.70 ಲಕ್ಷ ಕಳೆದು ಕೊಂಡಿರುವ ಘಟನೆ ಮಾಗಡಿ ತಾಲ್ಲೂಕಿನಲ್ಲಿ ನಡೆದಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಆನ್ ಲೈನ್ ಸರ್ವೀಸ್ ಲಿಂಕ್ ಹೆಸರಿನಲ್ಲಿ ಅಪರಿಚಿತ ವಾಟ್ಸ್ ಆ್ಯಪ್ ಸಂಖ್ಯೆಯಿಂದ ಬಂದಿದ್ದ ಸಂದೇಶವನ್ನು ಪ್ರಾಧ್ಯಾಪಕ ಕ್ಲಿಕ್ ಮಾಡಿದ್ದಾರೆ. ಆಗ ಬ್ಲಾಕ್ ಟ್ರೇಡಿಂಗ್ ನಲ್ಲಿ ಹೂಡಿಕೆ
ಮಾಡಿದರೆ ಶೇ 5–6 ಲಾಭ ಪಡೆಯಬಹುದು ಎಂಬ ಸಂದೇಶ ಕಾಣಿಸಿಕೊಂಡಿದೆ. ನಂತರ ಪ್ರಾಧ್ಯಾಪಕರು, ವಂಚಕರು ಕಳಿಸಿದ ಫಾರಂ ಭರ್ತಿ ಮಾಡಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊಂಡಿದ್ದಾರೆ.
ನಂತರ ವಂಚಕರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗೆ ಜುಲೈ 4ರಿಂದ ಆಗಸ್ಟ್ 6ರವರೆಗೆ ಒಟ್ಟು ₹12,69,101 ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.
Poll (Public Option)

Post a comment
Log in to write reviews