
ಕಳೆದ ದಿನಗಳಷ್ಟೇ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್‌ಗೆ ಚಾಕುವಿನಿಂದ ಇರಿದ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಅದೇ ರೀತಿಯ ಮತ್ತೊಂದು ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಪ್ರಯಾಣಿಕನೊಬ್ಬ ಕಲ್ಲಿನಿಂದ ಕಂಡಕ್ಟರ್ ತಲೆಯನ್ನು ಜಜ್ಜಲು ಬಂದಿದ್ದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್‌ಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಸೃಷ್ಟಿಯಾಗಿದೆ.
ಕಳೆದ ಶುಕ್ರವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಂಡಕ್ಟರ್ ತಲೆಗೆ ಕಲ್ಲು ಬೀಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಘಟನೆ ಟಿನ್ ಫ್ಯಾಕ್ಟರಿ ಬಳಿ ನಡೆದಿತ್ತು. KA-14F1107 ನಂಬರಿನ ಬಿಎಂಟಿಸಿ ಬಸ್‌ನಲ್ಲಿ ಘಟನೆ ನಡೆದಿದೆ.
ಇದರ ಜೊತೆಗೆ 3 ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಪ್ರಯಾಣಿಕ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಎಸ್ಕೇಪ್ ಆಗಿದ್ದ. ಇದಕ್ಕಾಗಿ ಆರೋಪಿ ಹೇಮಂತ್ ಎಂಬಾತ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು 3 ದಿನಗಳಿಂದ ಹೊಂಚು ಹಾಕಿದ್ದನು.
Poll (Public Option)

Post a comment
Log in to write reviews