
ಬೆಳಗಾವಿ: ರಾಜ್ಯದಲ್ಲಿ ಪ್ಯಾಲೆಸ್ತೈನ್ ಪರ ಘೋಷಣೆ , ಧ್ವಜ ಹಾರಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚಿಗಷ್ಟೇ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೈನ್ ಪರ ಘೋಷಣೆ ಕೂಗಿದ್ದು, ಧ್ವಜ ಹಾರಾಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಅದರ ಬೆನ್ನಲ್ಲೇ ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ದೊಡ್ಡ ಶಾಮಿಯಾನ ಹಾಕಿದ್ದಾರೆ. ಕಿಡಿಗೇಡಿಗಳು 200 ಮೀಟರ್ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಹಾಕಿದ್ದಾರೆ.
ಸದ್ಯ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ಯಾಲೆಸ್ತೀನ್ ಧ್ವಜ ತೆರವು ಮಾಡಿಸಿದ್ದಾರೆ. ಇನ್ನು ಮತ್ತೊಂದೆಡೆ ಗಣೇಶೋತ್ಸವ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 22ಕ್ಕೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ್ದರು. ಮೆರವಣಿಗೆ ಹಿನ್ನೆಲೆ ಪ್ಯಾಲೆಸ್ತೀನ್ ಧ್ವಜ ಕಟ್ಟಲಾಗಿತ್ತು.
Poll (Public Option)

Post a comment
Log in to write reviews