2024-12-24 07:15:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಗರ್ಲ್‌ಫ್ರೆಂಡ್‌ಗಾಗಿ ಕಂತೆ ಕಂತೆ ನೋಟಿನ ಕಾರ್ಪೆಟ್‌ ಹಾಸಿದ ವ್ಯಕ್ತಿ

ರಷ್ಯಾ: ಗೆಳತಿಯನ್ನು ಖುಷಿ ಪಡಿಸಲು ವ್ಯಕ್ತಿಯೊಬ್ಬ ಕಂತೆ-ಕಂತೆ ನೋಟುಗಳ ಕಾರ್ಪೆಟ್‌ ಹಾಸಿದ್ದಾನೆ. ರಷ್ಯಾದ ಉದ್ಯಮಿ ಸೆರ್ಗೆಯ್‌ ಕೊಸೆಂಕೊ ಎಂಬವನು ತನ್ನ ಗರ್ಲ್‌ ಫ್ರೆಂಡ್‌ ಸ್ವಾಗತಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್‌ ಅನ್ನು ಹಾಸಿದ ಹಳೆಯ ವಿಡಿಯೋ ಈಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ. @mr.thank.you ಹೆಸರಿನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಸೆರ್ಗೆಯ್‌ ಕೊಸೆಂಕೊ ತನ್ನ ಗೆಳತಿಗಾಗಿ ನೋಟಿನ ಕಾರ್ಪೆಟ್‌ ಹಾಸಿರುವುದನ್ನು ಕಾಣಬಹುದು. ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಕೊಸೆಂಕೊ, ಕಂತೆ-ಕಂತೆ ನೋಟುಗಳ ಮೇಲೆ ಆಕೆಯ ಕೈ ಹಿಡಿದು ನಡೆಸಿಕೊಂಡು ಬಂದಿದ್ದಾನೆ. ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 39.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಎಲ್ಲವೂ ದುಡ್ಡಿನ ಮಹಿಮೆ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್‌ ಆಗಿದ್ದಾರೆ.

ಇನ್ಸ್ಟಾಗ್ರಾಮ್‌ ಖಾತೆ

https://www.instagram.com/reel/CvSmE34M3nB/?utm_source=ig_web_copy_link

Post a comment

No Reviews