2024-12-24 05:44:00

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಾರ್​ನಲ್ಲಿ ಮನಸೋಇಚ್ಛೆ ಚೂರಿ ಚುಚ್ಚಿ ವ್ಯಕ್ತಿ ಕೊಲೆ

ದಾವಣಗೆರೆ:  ಮದ್ಯ ಸೇವಿಸುತ್ತಾ ಕುಳಿತಿದ್ದ ವ್ಯಕ್ತಿಯನ್ನು ಮನಸೋಇಚ್ಛೆ ಚೂರಿಯಿಂದ ಚುಚ್ಚಿ ಕೊಲೆಗೈದಿದ್ದ ಘಟನೆಯು ಇತ್ತೀಚೆಗೆ ಬಾರ್‌ವೊಂದರಲ್ಲಿ ನಡೆದಿದ್ದು, ಹಿಂದಿನ ಕಾರಣ ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಕೊಲೆಯಾದ ವ್ಯಕ್ತಿ ಹನುಮಂತ ಅಲಿಯಾಸ್​ ಕುಮಾರ್​ ತನ್ನ ಸಹೋದರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಕೆಲವು ಖಾಸಗಿ ಫೋಟೋಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿ ಗೌತಮ್​ ಪವಾರ್​ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್​ಪಿ ಉಮಾ ಪ್ರಶಾಂತ್​, "ಸೆ.21ರಂದು ಕೆಟಿಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಗೌತಮ್ ಪವಾರ್ (36) ಎಂಬಾತ ಹನುಮಂತ ಅಲಿಯಾಸ್ ಕುಮಾರ್ (30)ನನ್ನು ಚಾಕು ಇರಿದು ಕೊಲೆ ಮಾಡಿದ್ದ. ಗಾಯಾಳು ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.  

 

Post a comment

No Reviews