
ಬೆಂಗಳೂರು: ಮನ ಬಂದಂತೆ ಕಾರನ್ನು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಘಟನೆಯೊಂದು ರಾಜಾಜಿನಗರದಲ್ಲಿ ನಡೆದಿದೆ.
ಕಾರ್ ಚಾಲಕನು ರಸ್ತೆಯಲ್ಲಿ ಮನ ಬಂದಂತೆ ಕಾರು ಓಡಿಸುತ್ತ ರಸ್ತೆಯಲ್ಲಿ ಓಡಾಡುವವರಿಗೆ ಹಾಗೂ ಚಲಿಸುತ್ತಿರುವ ವಾಹನಗಳಿಗೂ ಗುದ್ದಿಕೊಂಡು ಓಡಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಕಾರು ಚಾಲಕನ ಹುಚ್ಚುತನದಿಂದ ವೆಂಕಟೇಶ್ ಎಂಬುವವರಿಗೆ ಗುದ್ದಿ ಗಾಯಗೊಳಿಸಿದ್ದಾನೆ. ಈ ಘಟನೆಯಿಂದ ವೆಂಕಟೇಶ್ ಕೈ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಈತ ರಸ್ತೆಯಲ್ಲಿ ಚಲಿಸುವಾಗ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಹಲವು ವಾಹನಗಳನ್ನ ಹಾನಿಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಒಂದನ್ನ ಪೋಸ್ಟ್ ಮಾಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಾಯಾಳು ವೆಂಕಟೇಶ್ ಪುತ್ರ ದೂರು ನೀಡಿದ ಆಧಾರದ ಮೇಲೆ FIR ದಾಖಲಿಸಿಕೊಂಡ ಪೊಲೀಸರು ಕಾರ್ ಡ್ರೈವರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews