ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ತಡೆಯಲು ಬಂದ ಒಬ್ಬ ವ್ಯಕ್ತಿ ಸಾವು
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಲೊಂಡಾ ರೈಲು ನಿಲ್ದಾಣ ಹಾಗೂ ಖಾನಾಪೂರ ರೈಲು ನಿಲ್ದಾಣಗಳ ನಡುವೆ ಪುದುಚೇರಿ-ದಾದರ್(ಚಾಲುಕ್ಯ ಎಕ್ಸ್ ಪ್ರೆಸ್) ರೈಲಿನಲ್ಲಿ ಟಿಸಿ ಟಿಕೆಟ್ ಕೇಳಿದ್ದಕ್ಕೆ ಒಬ್ಬ ಟಿಸಿ ಸೇರಿ ನಾಲ್ವರ ಮೇಲೆ ಮುಸುಕುದಾರಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದು ಹಲ್ಲೆ ನಡೆಸಿದ ಆರೋಪಿ ಪರಾರಿಯಾಗಿದ್ದಾನೆ.
ಟಿಕೆಟ್ ಚೆಕ್ ಮಾಡಲು ಬಂದ ಟಿಸಿ ಮೇಲೆ ಮುಸುಕುಧಾರಿ ಯುವಕನೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತನನ್ನು ರಕ್ಷಿಸಲು ಹೋದ ನಾಲ್ವರ ಮೇಲೂ ಮುಸುಕುಧಾರಿ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೀಡಾದ ಯುವಕ 24 ವರ್ಷದ ದೇವರ್ಷಿ ವರ್ಮಾ ಎಂದು ತಿಳಿದುಬಂದಿದೆ. ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ವಿಜಿಲೆನ್ಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರಾಧಿ ಪರಾರಿಯಾಗಿದ್ದು ಸ್ಥಳಕ್ಕೆ ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ
Post a comment
Log in to write reviews