
ಇಂದೋರ್: ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವಿಗೀಡಾದ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಬಲ್‌ವೀರ್ ಸಿಂಗ್ ಛಾಬ್ರಾ (73) ಸಾವಿಗೀಡಾದ ವ್ಯಕ್ತಿ.
ಇಂದೋರ್‌ನ ಫೂತಿಖೋಟಿ ಎಂಬಲ್ಲಿ ನಡೆಯುತ್ತಿದ್ದ ಯೋಗಶಿಬಿರದಲ್ಲಿ ಈ ಘಟನೆ ನಡೆದಿದೆ. ಯೋಗಶಿಬಿರಕ್ಕೆ ತಮ್ಮ ತಂಡದೊಂದಿಗೆ ಬಂದಿದ್ದ ಬಲ್‌ವೀರ್ ಸಿಂಗ್ ಪ್ರತ್ಯೇಕ ಉಡುಗೆ ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ, ಹಿಡಿದು ಯೋಗ ದೇಶಭಕ್ತಿ ಗೀತೆಯ ನರ್ತನಕ್ಕೆ ಹೆಜ್ಜೆ ಹಾಕುತ್ತಿದ್ದರು. ಇದ್ದಕ್ಕಿದ್ದಂತೆ ತಲೆಸುತ್ತು ಬಂದಂತಾಗಿ ಕುಸಿದುಬಿದ್ದಿದ್ದಾರೆ. ಅದು ಅವರ ಕಲಾಪ್ರದರ್ಶನದ ಭಾಗ ಎಂದು ಮೊದಲು ಭಾವಿಸಿದ್ದ ನಮಗೆ ಅವರು ಏಳದಿದ್ದಾಗ ಅನುಮಾನ ಬಂತು ಎಂದು ಶಿಬಿರದಲ್ಲಿನ ರಾಜ್‌ಕುಮಾರ್ ಜೈನ್ ಎಂಬವರು ತಿಳಿಸಿದ್ದಾರೆ.
ಕೂಡಲೇ ಅವರಿಗೆ ಸಿಪಿಆರ್ ಮಾಡಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಇಸಿಜಿ ಮತ್ತಿತರ ಪರೀಕ್ಷೆಗಳನ್ನು ನಡೆಸಿದ ವೈದ್ಯರು ಬಲ್‌ವೀರ್ ಮೃತಪಟ್ಟಿದ್ದನ್ನು ಖಚಿತಪಡಿಸಿದರು ಎಂದು ಜೈನ್ ತೀಳಿಸಿದ್ದಾರೆ .
Poll (Public Option)

Post a comment
Log in to write reviews