
ಪತ್ನಿಯಾ ಪ್ರಿಯಕರನನ್ನು ಕೊಂದ ಪತಿ..!
ಬೆಳಗಾವಿ: ಪತ್ನಿಯ ಅಕ್ರಮ ಸಂಭದದ ವಿಚಾರ ತಿಳಿದ ಪತಿ ಪತ್ನಿಯಾ ಪಿಯಕರನ್ನು ಕೊಲೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ ಪತ್ನಿ ಶಿಲ್ಪಾ ಪ್ರೇಮಿ ಮೋಮಿನ್ ಜೊತೆಗೆ ಬೈಕ್ ಮೇಲೆ ಹೋಗುತ್ತಿದ್ದದರು, ನೋಡ ನೋಡುತ್ತಿದ್ದಂತೆ ದಾಳಿ ನಡೆಸಿದ ಪತಿ ಹರಿತವಾದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯಲ್ಲಿ 28 ವರ್ಷದ ಮೋಮಿನ್ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಸ್ಥಳಿಯರು ಮಹಿಳೆಯನ್ನು ರಕ್ಷಿಸಿ ಕೊಡಲೆ ಬೈಕ್ನಲ್ಲಿ ಅವಳನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಪ್ರಕರಣವನ್ನು ದಾಖಲಿಸಿ ಗಂಭೀರ ಗಾಯಗೊಂಡ ಶಿಲ್ಪಾಳನ್ನ ತಕ್ಷಣವೇ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಕಲಿಸಿದ್ದಾರೆ.
ಹಲ್ಲೆ ನಡೆಸಿ ಪರಾರಿ ಅಗುತ್ತಿದ್ದ ವೇಳೆ ಅದೆ ಮಾರ್ಗದಲ್ಲಿ ಬರುತ್ತಿದ್ದ ಪೊಲೇಸ್ ಸಿಬಂಧಿ ಅಮೋಘನ ಬಟ್ಟೆ ಮೇಲೆ ರಕ್ತದ ಕಲೆಯನ್ನ ಕಂಡು ಪೊಲೀಸ್ ಸಿಬಂಧಿ ಅವನ್ನು ಪ್ರಶ್ನಿಸಿದ್ದಾಗ ಅವನು ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ. ತಕ್ಷಣ ಪೊಲೀಸರು ಅಮೋಘನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನಾ ಸ್ಥಲಕ್ಕೆ ಕುಲಗೋಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಯುವಾಕನ ಪತ್ತೆಯಗಿದೆ. ಈ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Poll (Public Option)

Post a comment
Log in to write reviews