
ಚಿಕ್ಕಮಗಳೂರು: ದರ್ಶನ್ ಸಿನಿಮಾದಲ್ಲಿ ಮಾತ್ರ ನಾಯಕ. ನಿಜ ಜೀವನದಲ್ಲಿ ಖಳನಾಯಕ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ. ಇಂದು (ಭಾನುವಾರ ಜೂನ್ 16) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಅಂತ ಯಾರೂ ಭಾವಿಸಿರಲಿಲ್ಲ. ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ. ಸಿನಿಮಾದಲ್ಲಿ ಮಾತ್ರ ನಾಯಕ ಆಗಿರುವ ದರ್ಶನ್ ನಿಜ ಜೀವನದಲ್ಲಿ ಖಳನಾಯಕರಾಗಿದ್ದಾರೆ . ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಇವರ ಕ್ರೂರ ಕೃತ್ಯಕ್ಕೆ ಕಾನೂನ ಪ್ರಕಾರ ಶಿಕ್ಷೆ ಆಗಲೇಬೇಕು. ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದ ಜೊತೆ ಇದೆ ಎಂದರು.
Poll (Public Option)

Post a comment
Log in to write reviews